ಕರಾವಳಿ

ಕುಂದಾಪುರ(ಶಂಕರನಾರಾಯಣ): ಮರಕ್ಕೆ ಡಿಕ್ಕಿ ಹೊಡೆದ ಬೈಕ್: ನಾಲ್ಕು ವರ್ಷದ ಕಂದಮ್ಮ ಬಲಿ

Pinterest LinkedIn Tumblr

ಕುಂದಾಪುರ: ನಿಯಂತ್ರಣದ ತಪ್ಪಿದ ಬೈಕ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ ನಾಲ್ಕೂವರೆ ವರ್ಷ ಪ್ರಾಯದ ಮಗು ಸಾವನ್ನಪ್ಪಿದ್ದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಕುಂದಾಪುರದ ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯ ಅಂಪಾರು ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ.

ಅಂಪಾರು ಮೂಲದ ವಾಸು ಎನ್ನುವವರ ಪುತ್ರಿ ನಾಲ್ಕುವರೆ ವರುಷ ಪ್ರಾಯದ ಸಿಂಚನ ಮೃತ ಪಟ್ಟ ಬಾಲಕಿ. ಹಳ್ನಾಡು ನಿವಾಸಿ ಕೃಷ್ಣ ಗಾಯಗೊಂಡ ಬೈಕ್ ಸವಾರ.

ಕೂಲಿ ಕಾರ್ಮಿಕನಾದ ಕೃಷ್ಣ ತನ್ನ ಸ್ನೇಹಿತ ವಾಸು ಎನ್ನುವವರ ಮಗಳಾದ ಸಿಂಚನಳನ್ನು ಆಸ್ಪತ್ರೆಗಾಗಿ ಕರೆದುಕೊಂಡು ಹೋಗುತ್ತಿದ್ದಾಗ ಬೈಕ್ ನಿಯಂತ್ರಣ ತಪ್ಪಿ ಮರಕ್ಕೆ‌ ಡಿಕ್ಕಿಯಾಗಿದೆ. ಈ ಸಂದರ್ಭ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದು ತೀವ್ರ ಗಾಯಗೊಂಡ ಕೃಷ್ಣ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.