ಉಡುಪಿ: ಕಳೆದ ಐದಾರು ತಿಂಗಳಿನಿಂದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಂಜೀವ್ ಎಂ. ಪಾಟೀಲ್ ವರ್ಗಾವಣೆಯಾಗಿದ್ದು ನೂತನ ಎಸ್ಪಿ ಲಕ್ಷ್ಮಣ್ ನಿಂಬರ್ಗಿ ಅವರನ್ನು ನೇಮಿಸಲಾಗಿದೆ.

ಕಳೆದ ಆ.೮ಕ್ಕೆ ಅಧಿಕಾರ ಸ್ವೀಕರಿಸಿದ್ದ ಸಂಜೀವ್ ಪಾಟೀಲ್ ಅವರು ಸದ್ಯ ಬೆಂಗಳೂರು ಡಿಸಿಪಿ ಆಗಿ ವರ್ಗವಾಗಿದ್ದಾರೆ. ಉಡುಪಿಯಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಮಟ್ಕಾ ದಂಧೆಗೆ ಬ್ರೇಕ್ ಹಾಕಲು ದಿಟ್ಟ ಕ್ರಮಕೈಗೊಂಡಿದ್ದರು. ಹತ್ತಕ್ಕೂ ಅಧಿಕ ಮಟ್ಕಾ ದಂಧೆಕೋರರ ಗಡಿಪಾರು ಮಾಡಲು ಜಿಲ್ಲಾಧಿಕರಿಗಳಿಗೆ ಶಿಪಾರಸ್ಸು ಮಾಡಿದ್ದರು. ಅಲ್ಲದೇ ವಾರವಾರವೂ ಎಸ್ಪಿ ಅವರು ನಡೆಸುತ್ತಿದ್ದ ‘ಫೋನ್-ಇನ್’ ಕಾರ್ಯಕ್ರಮ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಜನರೇ ಖುದ್ದು ಕರೆ ಮಾಡಿ ಎಸ್ಪಿ ಅವರಲ್ಲಿ ತಮ್ಮ ಸಮಸ್ಯೆ ಅಹವಾಲು ಹೇಳಿಕೊಳ್ಳುತ್ತಿದ್ದರು.
ಸದ್ಯ ನೂತನ ಎಸ್ಪಿ ಆಗಿ ನೇಮಕಗೊಂಡ ಲಕ್ಷ್ಮಣ್ ನಿಂಬರ್ಗಿ ಅವರು 2014 ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದು ಈ ಹಿಂದೆ ಚಿತ್ರದುರ್ಗದ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎ.ಎಸ್.ಪಿ) ಆಗಿದ್ದರು. ಅಲ್ಲದೇ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ಪ್ರೋಬೆಷನರಿ ಎಎಸ್ಪಿ ಆಗಿಯೂ ಇದ್ದರು.
Comments are closed.