ಕರ್ನಾಟಕ

ಗೋರಕ್ಷಣೆ ವೇಳೆ ಮಹಿಳೆ ಮೇಲೆ ಹಲ್ಲೆ ಆರೋಪ ; ನಿಜವಾದ ಘಟನೆಯನ್ನು ಬೆಂಗಳೂರು ಪೊಲೀಸರು ಬಿಚ್ಚಿಟ್ಟಿದ್ದಾರೆ ನೋಡಿ…

Pinterest LinkedIn Tumblr

ಬೆಂಗಳೂರು: ಕಳೆದ ವಾರ ಬೆಂಗಳೂರಿನ ದಕ್ಷಿಣದ ಅವಳಹಳ್ಳಿ ಕಸಾಯಿ ಖಾನೆಯಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ನಡೆದ ಬಗ್ಗೆ ದೂರು ನೀಡಿದ್ದ ಮಹಿಳೆಯ ಮೇಲೆ ಹಲ್ಲೆ ನಡೆಸಲಾಗಿತ್ತು ಎನ್ನುವ ಪ್ರಕರಣದ ಬಗ್ಗೆ ಪೋಲೀಸರು ಇಂದು ಸ್ಪಷ್ಟೀಕರಣ ನೀಡಿದ್ದಾರೆ. ಅದೊಂದು ಸುಳ್ಳು ಪ್ರಕರಣ ಎಂದು ಪೋಲೀಸರು ತಿಳಿಸಿದ್ದಾರೆ.

ಆಕೆ ಜನರಿಂದ ಹಲ್ಲೆಗೊಳಗಾಗುವ ಮುನ್ನ ಆಕೆಯ ಕಾರು ಆಟೋ ಒಂದಕ್ಕೆ ಢಿಕ್ಕಿ ಹೊಡೆದಿದ್ದಾಗಿ ಪೋಲೀಸರು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೊಲೀಸರು ನಂದಿನಿಯ ಕಾರು ಆಟೋ ಒಂದಕ್ಕೆ ಢಿಕ್ಕಿಯಾಗಿದ್ದ ಕಾರಣ ಆಕ್ರೋಶಗೊಂದ ಜನರು ಆಕೆಯ ಕಾರ್ ನ ಮೇಲೆ ಕಲ್ಲೆಸೆದಿದ್ದಾರೆ ಎಂದರು. ಜನಸಮೂಹದಲ್ಲಿದ್ದ ಕೆಲವರು ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗುತ್ತಿದ್ದರೆನ್ನುವ ನಂದಿನಿ ಅವರ ಆಪಾದನೆ ಸತ್ಯಕ್ಕೆ ದೂರವಾದದ್ದು ಎಂದು ಪೋಲೀಸರು ತಿಳಿಸಿದ್ದಾರೆ.

ಮಂಗಳವಾರ ಸಂಜೆ ಯೆಲಹಂಕಾ ನ್ಯೂ ಟೌನ್ ಸಮೀಪದ ದೊಡ್ಡ ಬೆಟ್ಟಹಳ್ಳಿಯಲ್ಲಿ ಕೋರ್ಟ್ ಕಮಿಷನರ್ ಅವರ ಕಾರ್ ನ ಮೇಲೆ ದಾಳಿ ನಡೆಸಿದ ಘಟನೆಗೆ ಸಂಬಂಧಿಸಿ ನಿನ್ನೆ ಒಟ್ಟು 13 ಜನರನ್ನು ಬಂಧಿಸಲಾಗಿದೆ. ನಗರದಲ್ಲಿನ ಅಕ್ರಮ ಕಸಾಯಿಖಾನೆಗಳ ತನಿಖೆಗೆ ತಂದ ರಚನೆಯಾಗಿದೆ ಎಂದು ಅವರು ತಿಳಿಸಿದರು.

Comments are closed.