ಕರಾವಳಿ

ಶಾಸಕರಿಗೆ ಗೋಲ್ಡ್ ಗಿಫ್ಟ್ ಬೇಡ: ಬಡ ಹೆಣ್ಣು ಮಕ್ಕಳ ಮದುವೆಗೆ ಮಾಂಗಲ್ಯ ಸರ ಕೊಡಿ: ಹಾಲಾಡಿ ಶ್ರೀನಿವಾಸ್ ಶೆಟ್ಟಿ

Pinterest LinkedIn Tumblr

ಕುಂದಾಪುರ: ವಿಧಾನಸೌಧ ವಜ್ರ ಮಹೋತ್ಸವ ಇದೇ ತಿಂಗಳ 25 ಮತ್ತು 26 ರಂದು ನಡೆಲಿದ್ದು, ಇದನ್ನು ಅದ್ದೂರಿಯಾಗಿ ನಡೆಸಲು ಸರ್ಕಾರ ಭಾರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇದರಂತೆ ಶಾಸಕರಿಗೆ, ಸಂಸತ್ ಸದಸ್ಯರಿಗೆ ಚಿನ್ನದ ಬಿಸ್ಕತ್ತು ಹಾಗೂ ಬೆಳ್ಳಿ ತಟ್ಟೆ ನೀಡಲು ಸರ್ಕಾರ ನಿರ್ಧರಿಸಿತ್ತು. ಇದಕ್ಕೆ ಭಾರೀ ವಿರೋಧ ಹಾಗೂ ಟೀಕೆಗಳು ವ್ಯಕ್ತವಾಗತೊಡಗಿವೆ.

ಕುಂದಾಪುರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಈ ಬಗ್ಗೆ ನೀಡಿದ ಹೇಳಿಕೆಸದ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಅವರು ಏನು ಹೇಳಿದ್ದಾರೆಂಬ ವಿವರ ಇಲ್ಲಿದೆ ನೋಡಿ.

‘ ವಿಧಾನಸೌಧ ವಜ್ರ ಮಹೋತ್ಸವ ಆಚರಣೆ ಸಾಂಕೇತಿಕವಾಗಿ ನಾಡಿಗೆ ತಿಳಿಸುವ ಕಾರ್ಯವಾಗಲಿ. ದುಬಾರಿ ವಜ್ರಮಹೋತ್ಸವ ಬೇಡ. ದುಂದು ವೆಚ್ಚ ಮಾಡುವುದು ಸರಿಯಲ್ಲ. ಸರಕಾರ ಆ ದುಂದು ವೆಚ್ಚದ ಹಣವನ್ನು ರಾಜ್ಯದ ಜನರ ವೈದ್ಯಕೀಯ ಸೇವೆಗೆ ಉಪಯೋಗಿಸಲಿ. ನೀಡಲು ಉದ್ದೇಶಿಸಿದ ಚಿನ್ನದ ಉಡುಗೊರೆಯನ್ನು ರಾಜ್ಯದ ಬಡ ಹೆಣ್ಣುಮಕ್ಕಳ ಮದುವೆಗೆ ಮಾಂಗಲ್ಯ ಸರಕ್ಕೆ ಕೊಡಿ ಎಂದಿದ್ದಾರೆ.

ಶಾಸಕರಿಗೆ ನೀಡುತ್ತಾರೆನ್ನಲಾದ ಚಿನ್ನದ ಉಡುಗೊರೆ, ಬೆಳ್ಳಿ ತಟ್ಟೆ ಗಿಫ್ಟ್ ನಾನು ಯಾವುದೇ ಕಾರಣಕ್ಕೂ ಸ್ವೀಕರಿಸಲ್ಲ ಎಂದು ಆವರು ಹೇಳಿದ್ದಾರೆ.

Comments are closed.