ಕರ್ನಾಟಕ

14ನೇ ಪ್ರವಾಸಿ ಭಾರತೀಯ ದಿವಸಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ ಹೇಳಿದ್ದೇನು…?

Pinterest LinkedIn Tumblr

ಬೆಂಗಳೂರು: ‘ಭಾರತದ ವಿಕಾಸ ಯಾತ್ರೆಯಲ್ಲಿ ಪ್ರವಾಸಿ ಭಾರತೀಯರು ಸಹಯಾತ್ರಿಗಳು. ನಿಮ್ಮ ಕೊಡುಗೆ ದೇಶಕ್ಕೆ ಮಹತ್ವದ್ದು’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

14ನೇ ಪ್ರವಾಸಿ ಭಾರತೀಯ ದಿವಸದಲ್ಲಿ ಭಾನುವಾರ ಮಾತನಾಡಿದ ಅವರು, ‘ವಿಶ್ವದ ಎಲ್ಲಾ ದೇಶಗಳಲ್ಲಿಯೂ ಭಾರತೀಯರ ಹೆಜ್ಜೆ ಗುರುತುಗಳಿವೆ. ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಶಿಕ್ಷಣ, ಆರ್ಥಿಕತೆ, ಪತ್ರಿಕೋದ್ಯಮ, ಬ್ಯಾಕಿಂಗ್‌, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತೀಯರ ಸಾಧನೆ ದೊಡ್ಡದು’ ಎಂದರು.

‘ಮೂರು ಕೋಟಿಗೂ ಹೆಚ್ಚು ಅನಿವಾಸಿ ಭಾರತೀಯರು ವಿಶ್ವದ ವಿವಿಧ ದೇಶಗಳಲ್ಲಿದ್ದಾರೆ. ಬೇರೆ ದೇಶಗಳಲ್ಲಿದ್ದರೂ ಅನಿವಾಸಿಗಳು ಭಾರತದ ಸಂಸ್ಕೃತಿಯನ್ನು ಉಳಿಸಿಕೊಂಡಿದ್ದಾರೆ’ ಎಂದು ಹೇಳಿದರು.

‘ಉದ್ಯೋಗ ಅರಸಿ ವಿದೇಶಕ್ಕೆ ವಲಸೆ ಹೋಗುವವರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸುವವರನ್ನು ಶಿಕ್ಷಿಸಲಾಗುವುದು. ಹೆಚ್ಚು ಶಿಕ್ಷಣವಿಲ್ಲದ, ವಿದೇಶಕ್ಕೆ ಕೆಲಸಕ್ಕೆ ಹೋಗಬಯಸುವ ಯುವಕರ ಕೌಶಲ್ಯ ವೃದ್ಧಿಗಾಗಿ ಪ್ರವಾಸಿ ಕೌಶಲ್‌ ವಿಕಾಸ್‌ ಯೋಜನಾ ಜಾರಿಗೆ ತರಲಾಗುವುದು’ ಎಂದರು.

‘ಅನಿವಾಸಿ ಭಾರತೀಯರ ಪಿಐಒ ಕಾರ್ಡ್‌ಗಳನ್ನು (Persons of Indian Origin Card) ಒಸಿಐ ಕಾರ್ಡ್‌ಗಳನ್ನಾಗಿ (Overseas Citizen of India Card) ಬದಲಿಸಿಕೊಳ್ಳಲು ವಿಧಿಸಲಾಗಿದ್ದ ಕೊನೆಯ ದಿನಾಂಕವನ್ನು ಈವರ್ಷದ ಜೂನ್‌ವರೆಗೆ ವಿಸ್ತರಿಸಲಾಗಿದೆ’ ಎಂದರು.

‘ಇಂದು ಸುಮಾರು 7 ಲಕ್ಷ ಭಾರತೀಯ ವಿದ್ಯಾರ್ಥಿಗಳು ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಈ ವಿದ್ಯಾರ್ಥಿಗಳ ಜ್ಞಾನದ ಲಾಭ ಭಾರತಕ್ಕೂ ಆಗಬೇಕು’ ಎಂದು ಹೇಳಿದರು.

‘ಪ್ರವಾಸಿ ಭಾರತೀಯ ಯುವಜನರು ತಮ್ಮ ಬೇರುಗಳಿರುವ ಭಾರತವನ್ನು ಮರೆಯಬಾರದು. ಪ್ರವಾಸಿ ಭಾರತೀಯ ಯುವಜನರು ಮತ್ತೆ ಮತ್ತೆ ಭಾರತಕ್ಕೆ ಬರಬೇಕು’ ಎಂದರು.

Comments are closed.