ಕರ್ನಾಟಕ

ಕೆಂಪುಕೋಟೆಯಲ್ಲಿ 70ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಜನತೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಏನು ಹೇಳಿದ್ದಾರೆ…ನೋಡೋಣ ಬನ್ನಿ…

Pinterest LinkedIn Tumblr

modi1

ನವದೆಹಲಿ: ಭಾರತ ಶ್ರೀಮಂತ ಸಂಸ್ಕೃತಿಗಳನ್ನು ಹೊಂದಿರುವ ಪುರಾತನ ದೇಶವಾಗಿದ್ದು, ಧೀರ್ಘಾಕಾಲಿಕ ಇತಿಹಾಸವನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ.

70ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಕೆಂಪುಕೋಟೆ ಮೇಲೆ ಧ್ವಜರೋಹಣ ಮಾಡಿದ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿರುವ ಅವರು, ಭಾರತ ಶ್ರೀಮಂತ ಸಂಸ್ಕೃತಿಯನ್ನು ಹೊಂದಿರುವ ಪುರಾತನ ದೇಶವಾಗಿದೆ. ನಮ್ಮ ದೇಶ ಧೀರ್ಘಕಾಲಿಕ ಇತಿಹಾಸವನ್ನು ಹೊಂದಿದೆ. ದೇಶಕ್ಕಾಗಿ ಸಾಕಷ್ಟು ಮಂದಿ ತ್ಯಾಗ ಮಾಡಿದ್ದಾರೆ. ಇಂದು ನಾವು ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್, ಪಂಡಿತ್ ನೆಹರು ನೆನೆಯುತ್ತಿದ್ದೇವೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಸಾಕಷ್ಟು ಸಮಸ್ಯೆಗಳಿವೆ ಆದರೆ, ಆದನ್ನು ಪರಿಹರಿಸಿಕೊಳ್ಳುವುದಕ್ಕೆ 125 ಕೋಟಿ ಮಿದುಳುಗಳಿವೆ. ಎಂತಹ ಸಮಸ್ಯೆ ಎದುರಾದರೂ ಅದನ್ನು ಎದುರಿಸಲು ಭಾರತ ಸಿದ್ಧವಿದೆ. ಇಂದು ನಾವು ಸ್ವಯಂ ಆಡಳಿತದಿಂದ ಉತ್ತಮ ಆಡಳಿತದೆಡೆಗೆ ಹೆಜ್ಜೆ ಹಾಕಿದ್ದೇವೆ. ಜವಾಬ್ದಾರಿ ಮತ್ತು ಹೊಣೆಗಾರಿಕಾ ಕೆಲಸದಿಂದ ಮಾತ್ರ ಉತ್ತಮ ಆಡಳಿತ ಸಾಧ್ಯ.

ಈ ಹಿಂದೆ ಉನ್ನತ ಆಸ್ಪತ್ರೆಗೆ ಹೋಗಬೇಕೆಂದರೆ ದೀರ್ಘಕಾಲದವರೆಗೂ ಕಾಯಬೇಕಿತ್ತು. ಆದರೆ, ಇಂದು ಆನ್ ಲೈನ್ ಮಾಧ್ಯಮಗಳು ಅಭಿವೃದ್ಧಿಗೊಂಡಾಗಿನಿಂದ ಆನ್ ಲೈನ್ ನೋಂದಾವಣಿ ಮಾಡಿಕೊಂಡು ಬದಲಾವಣೆಯನ್ನು ಕಂಡುಕೊಂಡಿದ್ದೇವೆ. ಇಂದು ನಾವು ಕೇವಲ 1 ನಿಮಿಷದಲ್ಲಿ 15 ಸಾವಿರ ರೈಲು ಟಿಕೆಟ್ ಗಳನ್ನು ಪಡೆಯಬಹುದಾಗಿದೆ. ಆನ್ ಲೈನ್ ಮೂಲಕವೇ ಹಣವನ್ನು ಹಿಂಪಡೆಯುವ ಸೌಲಭ್ಯವನ್ನು ನಾವು ಆರಂಭಿಸಿದ್ದೇವೆ. ಇಂದು ನಾವು 2-3 ವಾರದೊಳಗಾಗಿ ಹಣವನ್ನು ಸುಲಭವಾಗಿ ಹಿಂಪಡೆಯಬಹುದಾಗಿದೆ.

ಪಾಸ್ ಪೋರ್ಟ್ ಗಳಿಗಾಗಿ ಸಾಕಷ್ಟು ಪ್ರಕ್ರಿಯೆಗಳು ಪೂರ್ಣಗಳೊಳ್ಳುವವರೆಗೂ ಈ ಹಿಂದೆ ಕಾಯಬೇಕಿತ್ತು. ಇದಕ್ಕಾಗಿ ಸಾಕಷ್ಟು ತಪಾಸಣಾ ಪ್ರಕ್ರಿಯೆಗಳಿದ್ದವು. ಒಂದು ಪಾಸ್ ಪೋರ್ಟ್ ಮಾಡಿಸಿಕೊಳ್ಳಬೇಕೆಂದರೆ ಕನಿಷ್ಠ ಪಕ್ಷ 4-6 ತಿಂಗಳುಗಳ ಕಾಲ ಕಾಯಬೇಕಿದ್ದು. ಆದರೆ ಇಂದು ಕೇವಲ ವಾರಗಳಲ್ಲಿ ಪಾಸ್ ಪೋರ್ಟ್ ಗಳನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.

ನಾವು ನಮ್ಮ ಕೆಲಸದ ವೇಗವನ್ನು ಹೆಚ್ಚಿಸಿಕೊಳ್ಳುತ್ತಿದ್ದೇವೆ. ಇಂದು ನಾವು ಹಳ್ಳಿಗಳಲ್ಲಿ ರಸ್ತೆಗಳನ್ನು ಅಭಿವೃದ್ಧಿ ಪಡಿಸುತ್ತಿದ್ದೇವೆ. ಒಂದು ದಿನಗಲ್ಲಿ 100 ಕಿ.ಮೀ ನಷ್ಟು ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಹಿಂದೆ ದಿನದಲ್ಲಿ 70-75 ಕಿ.ಮೀ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿತ್ತು.

60 ವರ್ಷಗಳಲ್ಲಿ 14 ಜನರು ಗ್ಯಾಸ್ ಸಂಪರ್ಕಗಳನ್ನು ಪಡೆದುಕೊಂಡಿದ್ದಾರೆ. ಆದರೆ, ನಮ್ಮ ಸರ್ಕಾರ 60 ವಾರಗಳಲ್ಲಿ 4 ಕೋಟಿ ಜನರಿಗೆ ಗ್ಯಾಸ್ ಸಂಪರ್ಕವನ್ನು ನೀಡಿದೆ. ಹಣದುಬ್ಬರವನ್ನು ಶೇ.6ಕ್ಕಿಂತ ಹೆಚ್ಚಾಗಲು ನಾವು ಬಿಟ್ಟಿಲ್ಲ. 2 ವರ್ಷಗಳಿಂದ ದೇಶದಲ್ಲಿ ಸಂಭವಿಸಿದ ಬರ ಹಿನ್ನೆಲೆಯಲ್ಲಿ ಸರ್ಕಾರ ಸಾಕಷ್ಟು ಸವಾಲನ್ನು ಎದುರಿಸಬೇಕಾಗಿ ಬಂದು. ಇದರ ಪರಿಣಾಮ ಬೆಲೆ ಏರಿಕೆಯಾಗಿತ್ತು ಎಂದು ಹೇಳಿದ್ದಾರೆ.

ಇದೇ ವೇಳೆ ಎನ್ ಡಿಎ ಸರ್ಕಾರ ರೈತರಿಗೆ ಮಾಡಿದ ಸಹಾಯದ ಕುರಿತಂತೆ ಮಾತನಾಡಿದ ಅವರು, ನಮ್ಮ ಸರ್ಕಾರ ರೈತರಿಗೆ ಸಹಾಯಕವಾಗುವ ಸಲುವಾಗಿ ಸಾಕಷ್ಟು ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿದೆ. ನಮ್ಮ ದೇಶದ ರೈತರಿಗೆ ಸರಿಯಾದ ರೀತಿಯಲ್ಲಿ ನೀರು ದೊರಕಿದ್ದೇ ಆದರೆ, ನಮ್ಮ ಭೂಮಿಯನ್ನು ಅವರು ಚಿನ್ನವಾಗಿ ಮಾರ್ಪಾಡು ಮಾಡುತ್ತಾರೆ. 2022ರೊಳಗಾಗಿ ರೈತರ ಆದಾಯವನ್ನು ದುಪ್ಪಟ್ಟು ಮಾಡುವುದು ನನ್ನ ಕನಸಾಗಿದೆ. ಈ ಕನಸನ್ನು ವಾಸ್ತವಕ್ಕೆ ತರಲಾಗುತ್ತದೆ.

ಭಾರತ ಗುರ್ತಿಕೆ ಕಂಡುಕೊಳ್ಳುದರ ಬಗ್ಗೆ ನಾವು ಹೆಚ್ಚಿ ಗಮನ ಹರಿಸುತ್ತಿದ್ದೇವೆ. ಸುಧಾರಣೆ, ಸಾಧನೆ, ಬದಲಾವಣೆಯೇ ನಮ್ಮ ಪ್ರಮುಖ ಉದ್ದೇಶವಾಗಿದ್ದು, ಪ್ರತೀಯೊಂದು ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಶ್ರಮ ಪಡುತ್ತಿದ್ದೇವೆ. ನಮ್ಮ ಸರ್ಕಾರ ನೀತಿ ಹಾಗೂ ಧೋರಣೆಗಳು ಮುಕ್ತವಾಗಿವೆ. ಇಂದು ನಮ್ಮ ದೇಶ ಅಂತರ್ ಸಂಪರ್ಕ ಮತ್ತು ಪರಸ್ಪರಾವಲಂಬಿತ ದೇಶವಾಗಿ ನಿರ್ಮಾಣವಾಗುತ್ತಿದೆ. ವ್ಯವಹಾರಿಕ ಕ್ಷೇತ್ರದಲ್ಲಿನ ನಮ್ಮ ಸ್ಥಾನ ಉನ್ನತ ಮಟ್ಟಕ್ಕೇರುತ್ತಿದೆ. ಇಂದು ಭಾರತ ಅಭಿವೃದ್ಧಿಯನ್ನು ವಿಶ್ವಸಂಸ್ಥೆ ಗುರ್ತಿಸುತ್ತಿದೆ. ವಿಶ್ವಸಂಸ್ಥೆ ಹೇಳಿರುವಂತೆ ಶೀಘ್ರದಲ್ಲಿಯೇ ಭಾರತ ಶೀಘ್ರದಲ್ಲಿ ಟಾಪ್ 3ಗೆ ಸ್ಥಾನಕ್ಕೆ ಏರಲಿದೆ.

ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ದೇಶದ ಆರ್ಥಿಕತೆಗೆ ಬಲವನ್ನು ನೀಡಿದೆ. ಜಿಎಸ್ ಟಿ ಮಸೂದೆಗೆ ಬೆಂಬಲ ಸೂಚಿಸಿದ ಎಲ್ಲಾ ಪಕ್ಷಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ಒಂದೇ ದೇಶ, ಒಂದೇ ಚೌಕಟ್ಟು ಮತ್ತು ಒಂದು ಬೆಲೆ ಕುರಿತು ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

Comments are closed.