ಕರಾವಳಿ

ಕಾನೂನನ್ನು ಕೈಗೆ ತೆಗೆದುಕೊಳ್ಳುವ ಗೋರಕ್ಷಕರ ವಿರುದ್ಧ ಕ್ರಮಕ್ಕೆ ರಾಜ್ಯಗಳಿಗೆ ಕೇಂದ್ರ ಪತ್ರ

Pinterest LinkedIn Tumblr

dalit-beating-gujarat

ನವದೆಹಲಿ: ‘ನಕಲಿ ಗೋರಕ್ಷಕ’ ಸಮಿತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟ ಕೆಲವು ದಿನಗಳ ನಂತರ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (ಎಂ ಎಚ್ ಎ) ರಾಜ್ಯಗಳಿಗೆ ಪತ್ರ ಬರೆದಿದ್ದು ಕಾನೂನನ್ನು ಕೈಗೆ ತೆಗೆದುಕೊಳ್ಳುವ ಗೋರಕ್ಷಕರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲು ಸೂಚಿಸಿದೆ.

ರಾಜ್ಯ ಸರ್ಕಾರಗಳಿಗೆ ನೀಡಿರುವ ಈ ಸೂಚನೆಯಲ್ಲಿ ಎಂ ಎಚ್ ಎ ಹೇಳಿರುವಂತೆ, ಗೋಹತ್ಯೆ ನಿಷೇಧಿಸಿರುವ ರಾಜ್ಯಗಳಿಲ್ಲಿಯೂ ಕೂಡ ಗೋರಕ್ಷರ ನಡೆಗಳು ಶಿಕ್ಷಾರ್ಹ ಎಂದು ತಿಳಿಸಿದೆ.

“ಏನೇ ಇದ್ದರು, ಗೋಹತ್ಯೆ ಅಥವಾ ತಪ್ಪನ್ನು ತಡೆಯಲು ಯಾವುದೇ ಸ್ವತಂತ್ರ ವ್ಯಕ್ತಿ ಅಥವಾ ಗುಂಪು ಕಾನೂನನ್ನು ಕೈಗೆ ತೆಗೆದುಕೊಳ್ಳುವ ಯಾವುದೇ ಅವಕಾಶ ಇಲ್ಲ” ಎಂದು ಹೇಳಿಕೆ ತಿಳಿಸಿದೆ.

ಸಿ ಆರ್ ಪಿ ಸಿ ಸೆಕ್ಷನ್ 39 ನ್ನು ಉದಾಹರಿಸಿರುವ ಎಂ ಎಚ್ ಎ, ಇಂತಹ ಅಪಾರಾಧಗಳು ಕಂಡು ಬಂದಲ್ಲಿ, ಅಥವಾ ಅಪರಾಧಗಳ ಮುನ್ಸೂಚನೆ ದೊರೆತಲ್ಲಿ ಯಾರೇ ಆದರೂ ಹತ್ತಿರದ ಪೊಲೀಸ್ ಠಾಣೆ ಅಥವಾ ಮೆಜೆಸ್ಟ್ರೇಟ್ ಅವರಿಗೆ ತಿಳಿಸಿ ಕ್ರಮ ತೆಗೆದುಕೊಳ್ಳಲು ಸಹಕರಿಸಬೇಕು ಎಂದು ತಿಳಿಸಿದೆ.

ಗೋರಕ್ಷಕ ಸಂಘಗಳ ಮೇಲೆ ಶಿಸ್ತು ಕ್ರಮ ಜರುಗಿಸಿ, ಹೆಚ್ಚಿನ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕೆಂದು ರಾಜ್ಯ ಸರ್ಕಾರಗಳಿಗೆ ಎಂ ಎಚ್ ಎ ತಿಳಿಸಿದೆ.

“ಯಾವುದೇ ವ್ಯಕ್ತಿ ಅಥವಾ ಗುಂಪು ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅವರಿಗೆ ಶಿಸ್ತು ಕ್ರಮಗಳನ್ನು ಆರೋಪಿಸಿ, ತ್ವರಿತವಾಗಿ ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು” ಎಂದು ಎಂ ಎಚ್ ಎ ಹೇಳಿದೆ.

Comments are closed.