ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಪುತ್ರಿ ಸಶಾ ರಜಾಕಾಲೀನ ಅಟ್ಲಾಂಟಿಕ್ ನ ದ್ವೀಪ ಮಾರ್ತಾಸ್ ವಿನೆಯಾರ್ಡ್ ನ ಸೀ ಫುಡ್ ಪಾಯಿಂಟ್ ಹೊಟೇಲ್ ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ.
ಸಶಾ ಕೆಲಸದ ಸ್ಥಳದಲ್ಲಿ ತನ್ನನ್ನು ನತಾಶಾ ಎಂದು ಗುರುತು ಹೇಳಿಕೊಂಡು ಕೆಲಸ ಮಾಡುತ್ತಿದ್ದಾಳೆ. ರೆಸ್ಟೋರೆಂಟ್ ನ ಯುನಿಫಾರ್ಮ್ ಧರಿಸಿ, ಗ್ರಾಹಕರಿಂದ ಆರ್ಡರ್ ತೆಗೆದುಕೊಳ್ಳುತ್ತಿರುವ ಫೋಟೋ ಇದೀಗ ವೈರಲ್ ಆಗಿದೆ.
ಸಶಾ ಭದ್ರತೆಗಾಗಿ ಆರು ಗುಪ್ತ ಏಜೆಂಟರನ್ನು ನಿಯೋಜಿಸಲಾಗಿದ್ದು, ಆಕೆ ಪ್ರತಿದಿನ 4 ಗಂಟೆ ಕೆಲಸ ಮಾಡುತ್ತಾಳೆ. ಸಶಾ ಬರಾಕ್ ಒಬಾಮ ಅವರ ಪುತ್ರಿ ಎಂಬುದು ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುವ ಬಹುತೇಕ ಸಿಬ್ಬಂದಿಗೆ ತಿಳಿದಿರಲಿಲ್ಲ.
Comments are closed.