ಕರಾವಳಿ

ಅಪ್ಪಿತಪ್ಪಿಯೂ ಕಾಲೇಜಿನಲ್ಲಿ ರಾಗಿಂಗ್ ನಡೆಸಿದರೆ ಜೋಕೆ… !

Pinterest LinkedIn Tumblr

Exposición

ಬೆಂಗಳೂರು: ಅಪ್ಪಿತಪ್ಪಿಯೂ ಕಾಲೇಜಿನಲ್ಲಿ ರ್ಯಾಗಿಂಗ್ ನಡೆಸಿದೀರಿ ಜೋಕೆ ! ಹಾಗೊಂದು ವೇಳೆ ರ್ಯಾಗಿಂಗ್ ನಡೆಸಿದರೆ ಅಂತಹ ವಿದ್ಯಾರ್ಥಿಯನ್ನು ಕಾಲೇಜಿನಿಂದಲೇ ಗೇಟ್‍ಪಾಸ್ ಪಡೆಯುವುದು ಖಚಿತ.

ಪದವಿ ಪೂರ್ವ, ಉನ್ನತ ಶಿಕ್ಷಣ ಸಂಸ್ಥೆ ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ಹೆಚ್ಚುತ್ತಿರುವ ರ್ಯಾಗಿಂಗ್ ಪಿಡುಗಿಗೆ ಅಂತ್ಯ ಹಾಡಲು ಮುಂದಾಗಿರುವ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ಇದಕ್ಕಾಗಿ ಕಠಿಣ ನಿಯಮಗಳನ್ನು ರೂಪಿಸಲು ತೀರ್ಮಾನಿಸಿದೆ. ಈ ಸಂಬಂಧ ರಾಜ್ಯದ ಎಲ್ಲಾ ಕಾಲೇಜುಗಳು, ಪ್ರಾಂಶುಪಾಲರಿಗೆ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳಿಗೆ ಕಳೆದ ಜು.29ರಂದು ಪತ್ರ ಬರೆದಿದೆ. ಈ ಪತ್ರದಲ್ಲಿರುವ ಪ್ರಮುಖ ಅಂಶವೆಂದರೆ, ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ, ದೌರ್ಜನ್ಯ, ಬಲವಂತವಾಗಿ ಮಾನಸಿಕ ಹಿಂಸೆ ನೀಡುವುದು ಸೇರಿದಂತೆ ಯಾವುದೇ ರೀತಿಯ ಹಿಂಸೆ ನೀಡಿದರೆ ಅಂಥವರನ್ನು ಕಾಲೇಜಿನಿಂದಲೇ ಹೊರ ಹಾಕಬೇಕೆಂದು ಯುಜಿಸಿ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ.

ಈವರೆಗೂ ಕಾಲೇಜುಗಳಲ್ಲಿ ರ್ಯಾಗಿಂಗ್ ನಡೆಸಿದ ಆರೋಪದ ಮೇಲೆ ಅಮಾನತುಗೊಂಡಿರುವುದು ಹಾಗೂ ಮರು ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಸಂಪೂರ್ಣ ವಿವರವನ್ನು ಈ ತಿಂಗಳ ಅಂತ್ಯದೊಳಗೆ ಕಳುಹಿಸಿಕೊಡಬೇಕೆಂದು ತಾಕೀತು ಮಾಡಿದೆ.

ನಿಯಮಗಳೇನು:
ರ್ಯಾಗಿಂಗ್ ನಡೆಸುವ ವಿದ್ಯಾರ್ಥಿಗಳ ಹೆಸರನ್ನು ಇನ್ನು ಮುಂದೆ ಆಯಾ ಶಿಕ್ಷಣ ಸಂಸ್ಥೆಗಳ ನೋಟಿಸ್ ಬೋರ್ಡ್‍ನಲ್ಲಿ ದಪ್ಪ ಅಕ್ಷರಗಳಲ್ಲಿ ಹಾಕಬೇಕು. ಯಾವುದೇ ಕಾರಣಕ್ಕೂ ಈ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ಮರಪ್ರವೇಶ ನೀಡಬಾರದು. ಕಾಲೇಜಿನ ಕ್ಯಾಂಪಸ್, ಗ್ರಂಥಾಲಯ, ಸಭಾಂಗಣ, ಹಾಸ್ಟೆಲ್ ಮತ್ತು ಸಾರಿಗೆ ಸೇರಿದಂತೆ ಕಾಲೇಜಿನ ಯಾವುದೇ ಸೌಲಭ್ಯಗಳನ್ನು ನೀಡಬಾರದು. ವಿದ್ಯಾರ್ಥಿ ವೇತನ, ಭತ್ಯೆ, ಕಾಲೇಜಿನ ಗುರುತುಪತ್ರ ರದ್ದುಪಡಿಸಬೇಕು, ರ್ಯಾಗಿಂಗ್ ನಡೆಸುವ ವಿದ್ಯಾರ್ಥಿ ತನ್ನ ಪ್ರಾಯಶ್ಚಿತ್ತಕ್ಕಾಗಿ ಕೌನ್ಸಿಲಿಂಗ್ ಒಳಗಾಗುವುದು ಇಲ್ಲವೇ ಸಮುದಾಯದ ಸೇವೆಗೆ ಒಳಪಡಬೇಕು. ಪ್ರಾಂಶುಪಾಲರು, ಪ್ರೋಪೆಸರ್ ಮತ್ತು ಉಪ ಕುಲಪತಿಗಳು ಚುಡಾಯಿಸುವ ವಿದ್ಯಾರ್ಥಿಗಳ ಪೂರ್ಣ ವಿವರವನ್ನು ಕಳುಹಿಸಿಕೊಡಬೇಕು. ಇನ್ನು ಮುಂದೆ ಪ್ರತಿಯೊಬ್ಬ ವಿದ್ಯಾರ್ಥಿಯು ಶಿಸ್ತು ನಿಯಮಗಳನ್ನು ಪಾಲಿಸದಿದ್ದರೆ ಅಂತಹವರಿಗೆ ಪ್ರವೇಶವನ್ನೇ ನೀಡದಂತೆ ಯುಜಿಸಿ ನಿರ್ದೇಶನ ನೀಡಿದೆ.

ಇನ್ನು ಮುಂದೆ ಕಾಲೇಜುಗಳಲ್ಲಿ ಕಡ್ಡಾಯವಾಗಿ ಆಂತರಿಕ ದೂರು ಸಮಿತಿಯನ್ನು ರಚನೆ ಮಾಡಬೇಕು. ಯಾವ ವಿದ್ಯಾರ್ಥಿ ರ್ಯಾಗಿಂಗ್ ಇಲ್ಲವೇ ದೌರ್ಜನ್ಯಕ್ಕೆ ಒಳಗಾಗಿರುತ್ತಾರೋ ಅಂತಹವರು ಈ ಸಮಿತಿಗೆ ದೂರು ನೀಡಬೇಕು. ದೂರು ನೀಡಿದ ಒಂದು ತಿಂಗಳೊಳಗೆ ಅಂಹ ವಿದ್ಯಾರ್ಥಿ ಮೇಲೆ ವಿಚಾರಣೆ ನಡೆಸಿ ಶಿಸ್ತುಕ್ರಮ ಜರುಗಿಸಬೇಕು. ಒಂದು ವೇಳೆ ಇದನ್ನು ಉಲ್ಲಂಘಿಸಿದರೆ ಅಂತಹ ಕಾಲೇಜು ಇಲ್ಲವೇ ವಿವಿ ವಿರುದ್ಧ ಯುಜಿಸಿ ಪ್ರಕಾರ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

Comments are closed.