ಫಿಲಡೆಲ್ಫಿಯಾ: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾರ ಸಾಧನೆ ವಿವರಿಸುವ ಕಿರುಚಿತ್ರವೊಂದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕಾಣಿಸಿಕೊಂಡಿದ್ದಾರೆ.
ಒಬಾಮರ ಕಿರುಚಿತ್ರದಲ್ಲಿ ಕಾಣಿಸಿಕೊಂಡ ಏಕೈಕ ವಿಶ್ವ ನಾಯಕ ಎಂಬ ಹೆಗ್ಗಳಿಕೆಗೂ ಮೋದಿ ಪಾತ್ರರಾಗಿದ್ದಾರೆ. ಐದು ನಿಮಿಷದ ಈ ಕಿರುಚಿತ್ರವನ್ನು ಫಿಲಡೆಲ್ಫಿಯಾದಲ್ಲಿ ನಡೆದ ಡೆಮಾಕ್ರೆಟಿಕ್ ಪಕ್ಷದ ಮಹತ್ವದ ಅಧ್ಯಕೀಯ ಚುನಾವಣೆ ಸಮಾವೇಶದಲ್ಲಿ ಪ್ರದರ್ಶಿಸಲಾಗಿತ್ತು.
ಈ ಕಿರುಚಿತ್ರದ ದೃಶ್ಯದಲ್ಲಿ ಒಬಾಮಾ ಅವರು ಪ್ರಧಾನಿ ಮೋದಿ ಅವರನ್ನು ಪ್ಯಾರಿಸ್ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ ಭೇಟಿಯಾಗಿ ಮಾತನಾಡಿಸುತ್ತಿರುವ ಫೋಟೋವನ್ನು ಬಳಸಿಕೊಳ್ಳಲಾಗಿದೆ.
Comments are closed.