ಕರ್ನಾಟಕ

ರಾತ್ರಿ ಸುರಿದ ಭಾರಿ ಮಳೆಗೆ ಗೋಡೆ ಕುಸಿದು ಏಳು ವಾಹನ ಜಖಂ

Pinterest LinkedIn Tumblr

car

ಬೆಂಗಳೂರು: ಗರದಲ್ಲಿ ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಭಾರತೀಯ ವಾಯುಪಡೆ ತರಬೇತಿ ಕೇಂದ್ರದ ಗೋಡೆಯೊಂದು ಕುಸಿದು ಏಳು ವಾಹನಗಳು ಜಖಂಗೊಂಡಿರುವ ಘಟನೆ ಸಂಜಯನಗರದಲ್ಲಿ ನಡೆದಿದೆ.

ಮಾರತಹಳ್ಳಿ ಸಂಜಯನಗರ ಸಮೀಪದ ಏರ್ಫೋರ್ಸ್ ಗೋಡೆಯೊಂದು ದಿಢೀರ್ ಕುಸಿದು ಅಲ್ಲಿದ್ದ ಸುಮಾರು ಏಳೆಂಟು ವಾಹನಗಳಿಗೆ ಹಾನಿಯಾಗಿವೆ. ೨ ಇಂಡಿಕಾ, ೧ ಸ್ವಿಫ್ಟ್, ಆಟೋ, ಟೆಂಪೋ ಟ್ರಾವಲರ್ ವಾಹನಗಳು ಹಾನಿಗೊಳಗಾಗಿವೆ.

ನಗರದ ಕೊಲಂಬಿಯಾ ಆಸ್ಪತ್ರೆ, ಆರ್.ವಿ ಕಾಲೇಜು, ಹಲಸೂರಿನ ನಾಗಾ ಥಿಯೇಟರ್, ಮೈಸೂರು ಸರ್ಕಲ್ ಪೆಟ್ರೋಲ್ ಬಂಕ್ ಬಳಿ, ಶ್ರೀನಿವಾಸ ನಗರದ ಡಾ. ರಾಜ್‌ಕುಮಾರ್ ರಸ್ತೆ ಬಳಿ ಮರಗಳು ಉರುಳಿ ಬಿದ್ದಿವೆ.

ಇಂದಿರಾನಗರದ ಕಾವೇರಿ ಶಾಲೆ, ಕೋಲ್ಸ್ ಪಾರ್ಕ್, ಜೆಪಿನಗರ, ಬಸವನಗರ, ಕೋರಮಂಗಲ, ಕತ್ರಿಗುಪ್ಪೆ ಬಳಿ ಮರಗಳು ಉರುಳಿ ಬಿದ್ದ ಪ್ರಕರಣ ವರದಿಯಾಗಿವೆ. ಸತತ ನಾಲ್ಕನೇ ದಿನವಾದ ನಿನ್ನೆ ರಾತ್ರಿಯಿಂದ ಮಳೆ ಧಾರಾಕಾರವಾಗಿ ಸುರಿದಿದ್ದು, ಕೆಆರ್ ಪುರಂನ ಟಿನ್ ಫ್ಯಾಕ್ಟರಿ ಸಮೀಪದ ರಸ್ತೆ ಜಲಾವೃತಗೊಂಡ ಪರಿಣಾಮವಾಗಿ ರಸ್ತೆಯಿಡೀ ನೀರು ನಿಂತಿದ್ದು, ವಾಹನ ಸವಾರರು ತೊಂದರೆಗೊಳಗಾದರು.

Comments are closed.