
ಬಾಗಲಕೋಟೆ : ನಗರದ ಮೋಡಗಿ ಗಲ್ಲಿಯಲ್ಲಿ ಪತಿಯೊಬ್ಬ ಪತ್ನಿಯ ಪ್ರಿಯಕರನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಹತ್ಯೆಗೀಡಾದ ವ್ಯಕ್ತಿ ರಮೇಶ್ ಕುಲಕರ್ಣಿ (45) ಎಂಬಾತನಾಗಿದ್ದು, ಈತ ಮಹಿಳೆಯೊಂದಿಗೆ ಏಕಾಂತದಲ್ಲಿದ್ದ ವೇಳೆ ಹತ್ಯೆ ಮಾಡಲಾಗಿದೆ. ಅಣ್ಣಪ್ಪ ಗೋಟೂರ ಎಂಬಾತ ಮನೆಗೆ ಆಗಮಿಸಿದಾಗ ನೋಡಬಾರದ ಸ್ಥಿತಿಯಲ್ಲಿ ಪತ್ನಿ ಮತ್ತು ಆಕೆಯ ಪ್ರಿಯಕರ ರಮೇಶ್ ಕುಲಕರ್ಣಿಯನ್ನು ನೋಡಿದ್ದು ರೊಚ್ಚಿಗೆದ್ದು ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆಗೈದಿದ್ದಾನೆ .
ಅಣ್ಣಪ್ಪನನ್ನು ಬಾಗಲಕೋಟೆ ನಗರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Comments are closed.