ಅಂತರಾಷ್ಟ್ರೀಯ

ತನ್ನ ಮಗಳನ್ನು ಮದುವೆಯಾದರೆ 18 ಕೋಟಿ ಡಾಲರ್ ಕೊಡ್ತೀನಿ ಎಂದು ಘೋಷಿಸಿದ ತಂದೆ..! ಆದರೆ ಮದುವೆಯಾಗಲು ಯಾರು ಸಿದ್ಧರಿಲ್ಲ ..ಏಕೆ ಗೊತ್ತಾ…?

Pinterest LinkedIn Tumblr

marrage

ಬೀಜಿಂಗ್: ಮದುವೆಯೂ ಆಗಬೇಕು ಶ್ರೀಮಂತನೂ ಆಗಬೇಕೆಂದಿದ್ದರೆ ಇಲ್ಲೊಂದು ಒಳ್ಳೆಯ ಅವಕಾಶವಿದೆ ನೋಡಿ. ಈ ಕೋಟ್ಯಾಧಿಪತಿ ಅಪ್ಪ, ತನ್ನ ಮಗಳನ್ನು ವರಿಸುವ ಹುಡುಗನಿಗೆ 18 ಕೋಟಿ ಡಾಲರ್ ಕೊಡಲು ರೆಡಿ ಇದ್ದಾನೆ. ಆದರೆ ಆ ಹುಡುಗಿಯನ್ನು ಮದುವೆಯಾಗಲು ಯಾರೂ ಮುಂದೆ ಬರುತ್ತಿಲ್ಲ. ಏಕೆಂದರೆ ಅವಳೊಬ್ಬ ಲೆಸ್ಬಿಯನ್! ಚೀನಾದ ಕೋಟ್ಯಾಧೀಶ ಸೆಸಿಲ್ಚಾವೋ ಜೆ ಸುಂಗ್ ತನ್ನ ಸಲಿಂಗಕಾಮಿ ಮಗಳಾದ ಗೀಗಿಯ ಮದುವೆ ಮಾಡಲು ಮುಂದಾಗಿದ್ದಾನೆ. ಆದರೆ ಗೀಗಿ, ಕಳೆದ 9 ವರ್ಷದಿಂದಲೇ ತನ್ನ ಗೆಳತಿಯೊಂದಿಗೆ ವಾಸಿಸುತ್ತಿದ್ದಾಳೆ.

ಸೆಸಿಲ್ಚಾವೋ, ಕಳೆದ ಐದಾರು ವರ್ಷದಿಂದ ಇದೇ ಪ್ರಯತ್ನದಲ್ಲಿದ್ದಾನೆ. ವರ್ಷದಿಂದ ವರ್ಷಕ್ಕೆ ಅಳಿಯನಿಗೆ ಕೊಡುವ ಹಣವನ್ನೂ ಹೆಚ್ಚಿಸುತ್ತಿದ್ದಾನೆ. ಆದರೆ ಇನ್ನು ಯಾರಿಗೂ ಈ ಲಕ್ಷ್ಮೀ ಒಲಿಯಲಿಲ್ಲ. ಅನೇಕ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಈ ಆಫರ್ ಕೊಟ್ಟಿದ್ದಾರೆ ಸೆಸಿಲ್ಚಾವೋ.

Comments are closed.