
ಸತ್ತ ಮೇಲೆ ಸ್ವರ್ಗಕ್ಕೋ ನಗರಕಕ್ಕೋ ಹೋಗುತ್ತಾರೆಂಬುದು ನಮ್ಮ ನಂಬಿಕೆ. ಆದರೆ ಜಕಾರ್ತಾದಲ್ಲಿರುವ ತಾನಾ ತೊರಾಜಾ ಸಮುದಾಯದವರು ಸತ್ತ ಮೇಲೆಯೂ ಜೀವನವಿದೆ ಎಂದು ನಂಬುವವರು. ಇದೇ ಕಾರಣದಿಂದ ಕುಟುಂಬ ಸದಸ್ಯರು ಸತ್ತರೂ ಅವರ ಹೆಣವನ್ನು ಮನೆಯಲ್ಲಿಟ್ಟುಕೊಳ್ಳುತ್ತಾರೆ. ವರ್ಷಾನುಗಟ್ಟಲೆ ಅದಕ್ಕೆ ಸಿಂಗರಿಸುವುದು ಊಟ ಮಾಡಿಸುವುದನ್ನೂ ಮಾಡುತ್ತಾರೆ.
ಪ್ರವಾಸಿಗರ ಆಕರ್ಷಣೆ
ತೊರಾಜಾ ಸಮುದಾಯದ ಈ ಆಚರಣೆ ಖ್ಯಾತಿ ಪಡೆದಿದ್ದು, ಇದನ್ನು ನೇರವಾಗಿ ನೋಡಲೆಂದೇ ಪ್ರವಾಸಿಗರ ದಂಡು ಇಲ್ಲಿಗೆ ಹರಿದು ಬರುತ್ತದೆ. ಮನೆಯಲ್ಲಿ ಇಟ್ಟಿರುವ ಹೆಣಗಳ ಜತೆಗೆ ಅವರೂ ಸಮಯ ಕಳೆಯುತ್ತಾರೆ. ಅಷ್ಟೇ ಅಲ್ಲ ಇಲ್ಲಿರುವ ಮಕ್ಕಳಿಗೂ ಹೆಣವನ್ನು ನೋಡಿ ಭಯವಾ ಗುವುದಿಲ್ಲ. ಅವರೂ ಕೂಡಾ ಇದಕ್ಕೆ ಊಟ ಮಾಡಿಸುವ ಮತ್ತು ಬಟ್ಟೆತೊಡಿಸುವ ಕಾರ್ಯದಲ್ಲಿ ತೊಡಗಿಕೊಳ್ಳು ತ್ತಾರೆಂಬುದು ವಿಚಿತ್ರ.
ಅಂತ್ಯ ಸಂಸ್ಕಾರವೇ ವಿಚಿತ್ರ
ಸತ್ತಮೇಲೂ ಜೀವನವಿದೆ ಎಂದು ನಂಬುವ ಇಂಡೋನೇಷ್ಯಾದ ಜನರು, ಸತ್ತವರಿಗೆ ಮೊದಲು ಆಹಾರವನ್ನು ನೀಡುತ್ತಾರೆ. ನಂತರ ಪ್ರವಾಸಿಗರಿಗೆ ಹೆಣದ ಜತೆಗೆ ಫೋಟೋ ತೆಗೆದುಕೊಳ್ಳಲು ಅವಕಾಶ ಕೊಡುವ ಅವರು ಕೋಣವನ್ನು ಬಲಿ ಕೊಡುತ್ತಾರೆ. ನಂತರ ಹೆಣವನ್ನು ಮನೆಯ ಅಡುಗೆ ಕೋಣೆಗೆ ಕೊಂಡೊಯ್ದು ಅಲ್ಲಿಂದ ಸ್ಮಶಾನಕ್ಕೆ ಸಾಗಿಸಲಾಗುತ್ತದೆ. ಇಲ್ಲಿ ಕೆಲ ರಾಸಾಯನಿಕಗಳ ಮಿಶ್ರಣವನ್ನು ಶವದ ಮೇಲೆ ಲೇಪಿಸಲಾಗುತ್ತದೆ. ಇದರಿಂದ ಅದು ವರ್ಷಗಳಾದರೂ ಹಾಗೆಯೇ ಉಳಿಯುತ್ತದೆ. ಅದನ್ನು ಮತ್ತೆ ಮನೆಗೆ ತಂದು ಇಟ್ಟುಕೊಳ್ಳುತ್ತಾರೆ. ಪ್ರತಿನಿತ್ಯ ಅದಕ್ಕೆ ಬಟ್ಟೆ ತೊಡಿಸಿ, ಮೇಕಪ್ ಮಾಡಿ ಅವರು ಮಾಡಿದ ಅಡುಗೆಯನ್ನೂ ತಿನ್ನಿಸುತ್ತಾರೆ.
Comments are closed.