Wellwishes

ದುಬೈಯ ಖ್ಯಾತ ಉದ್ಯಮಿ,ಕೊಡುಗೈ ದಾನಿ, ಚಿತ್ರ ನಿರ್ಮಾಪಕ ಶ್ರೀ ಹರೀಶ್ ಶೇರಿಗಾರ್ ಆವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ : ಈ ಬಗ್ಗೆ ವಿಶೇಷ ವರದಿ

Pinterest LinkedIn Tumblr

ಮಂಗಳೂರು, ಸೆಪ್ಟಂಬರ್.11 : ದುಬೈಯ ಖ್ಯಾತ ಉದ್ಯಮಿ, ದುಬಾಯಿಯ ಆಕ್ಮೆ (Acme Building Materials Trading LLC. (UAE and Oman) ಸಂಸ್ಥೆಯ ಸಂಸ್ಥಾಪಕ, ಸಮಾಜ ಸೇವಕ, ಕನ್ನಡ ಹಾಗೂ ತುಳು ಚಿತ್ರ ನಿರ್ಮಾಪಕ ಹಾಗೂ ಖ್ಯಾತ ಹಾಡುಗಾರರು ಆಗಿರುವ ದೇಶವಿದೇಶಗಳಲ್ಲಿ ಜನಮನ್ನಣೆ ಗಳಿಸಿರುವ “ಕನ್ನಡಿಗವರ್ಲ್ಡ್ ಡಾಟ್ ಕಾಮ್” (www.kannadigaworld.com) ಸುದ್ಧಿ ಮಾಧ್ಯಮದ ಮುಖ್ಯಸ್ಥರಾದ ಕೊಡುಗೈ ದಾನಿ ಶ್ರೀ ಹರೀಶ್ ಶೇರಿಗಾರ್ ಅವರಿಗೆ ಇಂದು ಜನ್ಮದಿನದ ಸಂಭ್ರಮ.

ಶ್ರೀ ಅಪ್ಪು ಶೇರಿಗಾರ್ ಹಾಗೂ ಶ್ರೀಮತಿ ರಾಜೀವಿ ಅಪ್ಪು ಶೇರಿಗಾರ್ ಅವರ ಎಂಟು ಮಕ್ಕಳಲ್ಲಿ ಅತೀ ಕಿರಿಯವರಾಗಿ ಮಂಗಳೂರಿನ ಶಕ್ತಿನಗರದಲ್ಲಿ ಜನಿಸಿರುವ ಶ್ರೀ ಹರೀಶ್ ಶೇರಿಗಾರ್ ಅವರು ತಮ್ಮ ವಿದ್ಯಾಭ್ಯಾಸ ನಂತರ ಚಿಕ್ಕ ವಯಸ್ಸಿನಲ್ಲಿಯೇ ದೂರದ ಗಲ್ಪ್ ದೇಶಕ್ಕೆ ತೆರಳಿ ಉದ್ಯಮವನ್ನು ಸ್ಥಾಪಿಸಿ ಬಹಳ ಕಡಿಮೆ ಸಮಯದಲ್ಲೇ ಖ್ಯಾತ ಉದ್ಯಮಿಯಾಗಿ ಗುರುತಿಸಿಕೊಂಡು ಜನ ಮೆಚ್ಚುಗೆಗೆ ಪಾತ್ರರಾಗಿದ್ದರು.

ತಮ್ಮ ಅವಿರತ ಸಾಧನೆಯಿಂದ ಯಸಸ್ವಿ ಉದ್ಯಮಿಯಾಗಿ ಬೆಳೆದ ಶ್ರೀ ಹರೀಶ್ ಶೇರಿಗಾರ್ ಅವರು ತಾವು ಹುಟ್ಟಿದ್ದ ತಾಯಿನಾಡನ್ನು ಮರೆಯದೆ ಕಷ್ಟದಲ್ಲಿದ್ದ ಅದೇಷ್ಟು ಮಂದಿಗೆ ಸಹಾಯ ಹಸ್ತ ಚಾಚುವ ಮೂಲಕ ಅವರ ಜೀವನಕ್ಕೆ ದಾರಿಮಾಡಿ ಕೊಟ್ಟವರು. ತನ್ನ ಸಮಾಜದಲ್ಲಿ ಕಷ್ಟದಲ್ಲಿದ್ದವರನ್ನು ಗುರುತಿಸಿ ಅವರ ಶಿಕ್ಷಣಕ್ಕೆ ಸಹಾಯ ಮಾಡಿದ್ದಾರೆ. ಮಾತ್ರವಲ್ಲದೇ ಬಡತನಲ್ಲಿದ್ದ ಸಮಾಜ ಬಾಂಧವರ ಕೌಟುಂಬಿಕ ಸಮಸೈಗಳಿಗೂ ಅಪಾರ ಕೊಡುಗೆ ಸಲ್ಲಿಸಿದ್ದಾರೆ.

ದ.ಕ.ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಹಲವಾರು ಅಶ್ರಮಗಳಿಗೆ ಧನ ಸಹಾಯ ಮಾಡುವ ಮೂಲಕ ಮಾನವೀಯ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮಾತ್ರವಲ್ಲದೇ ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಏಳಿಗೆಗೆ ಬಹಳಷ್ಟು ಶ್ರಮಿಸಿದ್ದಾರೆ. ಜೊತೆಗೆ ದುಬೈಯಲ್ಲೂ ಸಮಾಜ ಬಾಂಧವರನ್ನು ಒಟ್ಟು ಸೇರಿಸಿ ದೇವಾಡಿಗ ಸಂಘವನ್ನು ಸ್ಥಾಪಿಸುವಲ್ಲಿ ಹಾಗೂ ಸಂಘದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ನಗರದಲ್ಲಿ ಉದ್ಯೋಗವಿಲ್ಲದೇ ಕಷ್ಟದಲ್ಲಿದ್ದ ಹಲವಾರು ಮಂದಿಯನ್ನು ದುಬಾಯಿಗೆ ಕರೆದುಕೊಂಡು ಹೋಗಿ ಉದ್ಯೋಗ ನೀಡುವ ಮೂಲಕ ಅವರಿಗೆ ಬದುಕು ನೀಡಿದ ಶ್ರೀ ಹರೀಶ್ ಶೇರಿಗಾರ್ ಅವರು ತಾವು ಕಲಿತ ಶಾಲಾ ಕಾಲೇಜುಗಳಿಗೂ ತಮ್ಮ ಸಹಾಯ ಹಸ್ತ ನೀಡಿದ್ದಾರೆ.

ಸಿನಿಮಾ ರಂಗದಲ್ಲಿ ಬಹಳಷ್ಟು ಆಸಕ್ತಿ ಹೊಂದಿದ್ದ ಶ್ರೀ ಹರೀಶ್ ಶೇರಿಗಾರ್ ಅವರು ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡುವ ಉದ್ದೇಶದಿಂದ ಬಹುಕೊಟ್ಟಿ ವೆಚ್ಚದ “ಮಾರ್ಚ್ 22,” ಕನ್ನಡ ಚಲನ ಚಿತ್ರವನ್ನು ನಿರ್ಮಿಸಿದರು. ಅ ಚಿತ್ರಕ್ಕೆ ಹಲವು ವಿಭಾಗಳಲ್ಲಿ ಹಲವಾರು ರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿಗಳು ಲಭಿಸಿರುವುದು ಉಲ್ಲೇಖನೀಯ.

ಮಾತ್ರವಲ್ಲದೇ ಅ ಬಳಿಕ ಅವರು ನಿರ್ಮಿಸಿರುವ “ಯಾಣ” ಹಾಗೂ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ” ಕನ್ನಡ ಚಲನ ಚಿತ್ರ ಯಶಸ್ಸು ಪ್ರದರ್ಶನವನ್ನು ಕಂಡಿದೆ.

ಇದೀಗ ಕಳೆದ ವರ್ಷ “ಇಂಗ್ಲೀಷ್” ಎಂಬ ಹೆಸರಿನ ತುಳು ಚಿತ್ರವನ್ನು ನಿರ್ಮಿಸಿದ್ದು, ಈ ಚಿತ್ರದಲ್ಲಿ ಬಹುಭಾಷಾ ನಟ, ಸ್ಯಾಂಡಲ್​ವುಡ್​ನ ಹ್ಯಾಂಡ್ಸಮ್​ ಹೀರೋ, ಮೇರು ನಟ ಶ್ರೀ ಹರೀಶ್ ಶೇರಿಗಾರ್ ಹಾಗೂ ಅವರ ಕುಟುಂಬದ ಆಪ್ತರೂ ಆಗಿರುವ ಶ್ರೀ ಅನಂತ್​ ನಾಗ್ ಅವರು ಪ್ರಥಮ ಬಾರಿಗೆ ಈ ಚಿತ್ರದ ಮೂಲಕ ತುಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

( ಬಹುನಿರೀಕ್ಷಿತ “ಇಂಗ್ಲೀಷ್” ತುಳು ಚಿತ್ರ ಕಳೆದ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗ ಬೇಕಿತ್ತು.ಆದರೆ ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆ ವಿಳಂಬವಾಗಿದ್ದು, ಇದೀಗ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ತೆರೆಗೆ ಬರಲು ಸಿದ್ದತೆ ನಡೆಸಿದೆ.)

ಹತ್ತು ಹಲವು ಸಮಾಜಮುಖಿ ಕೆಲಸಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಹಾಗೂ ದಾನಧರ್ಮಗಳ ಮೂಲಕ ಬಡವರ, ಕಷ್ಟದಲ್ಲಿದ್ದವರ ಕಣ್ಣೀರು ಒರೆಸುವ ಶ್ರೀ ಹರೀಶ್ ಶೇರಿಗಾರ್ ಅವರ ಮುಂದಿನ ಬದುಕು ಮತ್ತಷ್ಟು ಉಜ್ವಲವಾಗಲಿ, ದೇವರು ಅವರಿಗೆ ಹಾಗೂ ಅವರ ಕುಟುಂಬಕ್ಕೆ ಸುಖ, ಸಮೃದ್ಧಿ, ಅಯುರಾರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತ “ಕನ್ನಡಿಗವರ್ಲ್ಡ್ ಡಾಟ್ ಕಾಮ್” (www.kannadigaworld.com) ಸುದ್ಧಿ ಮಾಧ್ಯಮದ ಸಿಬ್ಬಂದಿ ವರ್ಗ ತಮಗೆ ಹಾರ್ದಿಕ ಶುಭಾಶಯವನ್ನು ಸಲ್ಲಿಸುತ್ತಿದೆ.

ನಮ್ಮ ಬದುಕಿಗೆ ದಾರಿ ದೀಪವಾಗಿರುವ, ನಮ್ಮೆಲ್ಲರ ನೆಚ್ಚಿನ ಹರೀಶಣ್ಣ ತಮಗೆ ಹುಟ್ಟು ಹಬ್ಬದ ಶುಭಾಶಯಗಳು ಸಾರ್.

Comments are closed.