ಕ್ರೀಡೆ

ಯುವ ಚೆಸ್‌ ಆಟಗಾರ ಪ್ರಜ್ಞಾನಂದ್‌ ಪೋಷಕರಿಗೆ ಎಲೆಕ್ಟ್ರಿಕ್ ಕಾರು ಉಡುಗೊರೆ ಘೋಷಿಸಿದ ಆನಂದ್‌ ಮಹೀಂದ್ರಾ

Pinterest LinkedIn Tumblr

ನವದೆಹಲಿ: ಉದ್ಯಮಿ ಆನಂದ್‌ ಮಹೀಂದ್ರಾ ಅವರು ಯುವ ಚೆಸ್‌ ಆಟಗಾರ ಆರ್.ಪ್ರಜ್ಞಾನಂದ ಅವರ ಪೋಷಕರಿಗೆ ಎಲೆಕ್ಟ್ರಿಕ್‌ ಕಾರನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಎಕ್ಸ್‌ (ಟ್ವೀಟರ್) ನಲ್ಲಿ ಹಂಚಿಕೊಂಡಿದ್ದಾರೆ.‌

ಇತ್ತೀಚೆಗೆ ನಡೆದ ವಿಶ್ವ ಚೆಸ್‌ ಪಂದ್ಯಾವಳಿಯ ಫೈನಲ್‌ ಟೈ ಬೇಕರ್‌ ಸ್ಪರ್ಧೆಯಲ್ಲಿ ಭಾರತದ ಆರ್.‌ ಪ್ರಜ್ಞಾನಂದ ರನ್ನರ್‌ ಅಪ್‌ ಆಗಿದ್ದರು. ಈ ಹಿನ್ನೆಲೆಯಲ್ಲಿ ಪ್ರಜ್ಞಾನಂದ ಅವರಿಗೆ ಥಾರ್‌ ಕಾರನ್ನು ಉದ್ಯಮಿ ಆನಂದ್‌ ಮಹೀಂದ್ರಾ ಅವರು ಉಡುಗೊರೆಯಾಗಿ ನೀಡಬೇಕೆಂದು ಹಲವರು ಟ್ವೀಟರ್‌ ನಲ್ಲಿ ಒತ್ತಾಯಿಸಿದ್ದರು.

ಈ ಟ್ವೀಟ್‌ ಗೆ ಪ್ರತಿಕ್ರಿಯಿಸಿದ್ದ ಆನಂದ್‌ ಮಹೀಂದ್ರಾ ಅವರು, ನಿಮ್ಮ ಭಾವನೆಯನ್ನು ನಾನು ಗೌರವಿಸುತ್ತೇನೆ. ನಿಮ್ಮಂತೆ ಹಲವಾರು ಮಂದಿ ಪ್ರಜ್ಞಾನಂದ್‌ ಅವರಿಗೆ ಕಾರನ್ನು ಉಡುಗೊರೆಯಾಗಿ ಕೊಡಬೇಕೆಂದು ಒತ್ತಾಯಿಸಿದ್ದು ನನ್ನಲ್ಲಿ ಮತ್ತೊಂದು ಐಡಿಯಾ ಇದೆ. ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಜ್ಞಾನಂದ ಪೋಷಕರನ್ನು ಪ್ರೋತ್ಸಾಹಿಸಲು ಬಯಸುತ್ತೇನೆ. ಈ ನಿಟ್ಟಿನಲ್ಲಿ ನಾನು ಪ್ರಜ್ಞಾನಂದ ಪೋಷಕರಿಗೆ (ಎಕ್ಸ್.ಯು.ವಿ400) XUV400 ಎಲೆಕ್ಟ್ರಿಕ್‌ ವಾಹನ ಉಡುಗೊರೆಯಾಗಿ ಕೊಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

Comments are closed.