ಕ್ರೀಡೆ

ರೈತರ ಪ್ರತಿಭಟನೆ ಬೆಂಬಲಿಸಿದ್ದ ನಟಿ ರಿಹಾನ್ನಾಗೆ ಕ್ರಿಕೆಟಿಗರಾದ ಸಚಿನ್, ಕೊಹ್ಲಿ ಸೇರಿದಂತೆ ಹಲವು ಕ್ರಿಕಟಿಗರ ತಿರುಗೇಟು

Pinterest LinkedIn Tumblr

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ವಿಚಾರವಾಗಿ ಟ್ವೀಟ್ ಮಾಡಿ ಭಾರಿ ಸುದ್ದಿಗೆ ಗ್ರಾಸವಾಗಿರುವ ಖ್ಯಾತ ಪಾಪ್ ಗಾಯಕಿ ಮತ್ತು ಹಾಲಿವುಡ್ ನಟಿ ರಿಹಾನ್ನಾಗೆ ಭಾರತದ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಕ್ರಿಕಟಿಗರು ತಿರುಗೇಟು ನೀಡಿದ್ದಾರೆ.

ರೈತರ ಹೋರಾಟ ಬೆಂಬಲಿಸಿ ರಿಹಾನ್ನಾ ಮಾಡಿದ ಟ್ವೀಟ್ ಗೆ ಇದೀಗ ಭಾರತದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಟ್ವೀಟ್ ಗೆ ತಿರುಗೇಟು ನೀಡಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು, ಭಾರತದ ಸಾರ್ವಭೌಮತ್ವದ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ,.. ಇಲ್ಲಿ ಬಾಹ್ಯವ್ಯಕ್ತಿ ಅಥವಾ ಶಕ್ತಿಗಳು ಪ್ರೇಕ್ಷಕರಾಗಬಹುದು… ಆದರೆ ಪಾತ್ರದಾರಿಗಳಲ್ಲ. ಭಾರತೀಯರಿಗೆ ಭಾರತ ಏನು ಎಂಬುದು ತಿಳಿದಿದೆ ಮತ್ತು ಭಾರತಕ್ಕಾಗಿ ಭಾರತವೇ ನಿರ್ಧರಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಸಚಿನ್ ಟ್ವೀಟ್ ಬೆಂಬಲ ನೀಡಿವಂತೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಟ್ವೀಟ್ ಮಾಡಿದ್ದು, ಭಿನ್ನಾಭಿಪ್ರಾಯಗಳ ಈ ಸಮಯದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿರಬೇಕು. ರೈತರು ನಮ್ಮ ದೇಶದ ಅವಿಭಾಜ್ಯ ಅಂಗವಾಗಿದ್ದಾರೆ ಮತ್ತು ಶಾಂತಿಯಿಂದ ಸಮಸ್ಯೆ ಬಗೆ ಹರಿಸಿಕೊಳ್ಳಲು ನಾವು ಒಗ್ಗಟ್ಟಾಗಿರಬೇಕು. ಆದ ಮಾತ್ರ ಸೌಹಾರ್ದಯುತ ಪರಿಹಾರವು ಕಂಡುಬರುತ್ತದೆ ಎಂದು ಹೇಳಿದ್ದಾರೆ.

ಅಂತೆಯೇ ಟೀಂ ಇಂಡಿಯಾ ಉಪನಾಯಕ ಅಜಿಂಕ್ಯ ರಹಾನೆ ಕೂಡ ಟ್ವೀಟ್ ಮಾಡಿದ್ದು, ಒಗ್ಗಟ್ಟಿನಿಂದ ಪರಿಹರಿಸಲು ಸಾಧ್ಯವಾಗದೇ ಇರುವ ಸಮಸ್ಯೆಗಳೇ ಇಲ್ಲ. ಎಲ್ಲರೂ ಒಗ್ಗೂಡಿ ನಮ್ಮ ಆಂತರಕಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳೋಣ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ರೋಹಿತ್ ಶರ್ಮಾ ಕೂಡ ಟ್ವೀಟ್ ಮಾಡಿದ್ದು, ಒಗ್ಗಟ್ಟಿನಿಂದ ಭಾರತ ಯಾವಾಗಲೂ ಬಲಶಾಲಿಯಾಗಿದೆ. ನಾವೆಲ್ಲರೂ ಅದೇ ಒಗ್ಗಟ್ಟಿನಿಂದ ನಿಂತು ಪರಿಹಾರ ಕಂಡುಕೊಳ್ಳುವುದ ಅಗತ್ಯ. ನಮ್ಮ ರೈತರು ನಮ್ಮ ರಾಷ್ಟ್ರದ ಯೋಗಕ್ಷೇಮದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ ಮತ್ತು ಒಟ್ಟಿಗೆ ಪರಿಹಾರವನ್ನು ಕಂಡುಕೊಳ್ಳಲು ಪ್ರತಿಯೊಬ್ಬರೂ ತಮ್ಮ ಪಾತ್ರಗಳನ್ನು ನಿರ್ವಹಿಸುತ್ತಾರೆ ಎಂಬ ಭರವಸೆ ನನಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಇದೇ ವಿಚಾರವಾಗಿ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಅವರೂ ಕೂಡ ಟ್ವೀಟ್ ಮಾಡಿದ್ದು, ಭಾರತೀಯ ಆರ್ಥ ವ್ಯವಸ್ಥೆಯಲ್ಲಿ ಕೃಷಿ ಮತ್ತು ಕೃಷಿಕ ಬಹಳ ಮುಖ್ಯವಾದ ಭಾಗವಾಗಿದ್ದಾರೆ. ರೈತರು ಯಾವುದೇ ದೇಶದ ಪರಿಸರ ವ್ಯವಸ್ಥೆಯ ಬೆನ್ನೆಲುಬು. ಇದು ಆಂತರಿಕ ವಿಷಯವಾಗಿದ್ದು, ಪರಸ್ಪರ ಮಾತುಕತೆ ಮೂಲಕ ಪರಿಹರಿಸಲಾಗುವುದು ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.

Comments are closed.