ಕ್ರೀಡೆ

ಐಪಿಎಲ್​ನಲ್ಲಿ ಕೋಟಿಗಟ್ಟಲೆ ಹಣ ಪಡೆಯುವ ಆಟಗಾರರು ಯಾರು ಗೊತ್ತೇ …?

Pinterest LinkedIn Tumblr

ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎಂಬ ಖ್ಯಾತಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಭಾಜನವಾಗಿದ್ದು, ಈ ಲೀಗ್’ನಲ್ಲಿ ದೇಶಿಯ ಹಾಗು ವಿದೇಶಿ ಆಟಗಾರರು ಕೋಟಿಗಟ್ಟಲೆ ಹಣ ಗಳಿಸುತ್ತಾರೆ. ಐಪಿಎಲ್​ನ 13 ಸೀಸನ್​ ಮೂಲಕ ಮೂವರು ಕ್ರಿಕೆಟಿಗರು 100 ಕೋಟಿಗೂ ಅಧಿಕ ಸಂಪಾದಿಸಿದ್ದಾರೆ. ಈ ಮೂವರೊಂದಿಗೆ ಈಗ ಮತ್ತೋರ್ವ ದೇಶಿಯ ಕ್ರಿಕೆಟಿಗ ಸೇರಿಕೊಂಡಿದ್ದಾನೆ.

ಈ ಮೂವರು ಕ್ರಿಕೆಟಿಗರು ಭಾರತೀಯ ಆಟಗಾರರು ಎಂಬುದು ವಿಶೇಷ. ಇದೀಗ ಈ ಪಟ್ಟಿಗೆ ಮತ್ತೋರ್ವ ಆಟಗಾರ ಕೂಡ ಸೇರ್ಪಡೆಯಾಗಲಿದ್ದಾರೆ. ಅವರು ಮತ್ಯಾರೂ ಅಲ್ಲ ಸುರೇಶ್ ರೈನಾ.

ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್​ ಪರ ಕಣಕ್ಕಿಳಿಯುವ ಮೂಲಕ ಸುರೇಶ್ ರೈನಾ ಕೂಡ 100 ಕೋಟಿಗೆ ಸಂಭಾವನೆ ಪಡೆದ ಪಟ್ಟಿಗೆ ಎಂಟ್ರಿ ಕೊಡಲಿದ್ದಾರೆ. ಹಾಗಿದ್ರೆ ಐಪಿಎಲ್​ನಲ್ಲಿ ಸಂಭಾವನೆ ವಿಷಯದಲ್ಲಿ ಯಾರು ನಂಬರ್ 1 ಎಂದು ನೋಡೋಣ.

ಸುರೇಶ್ ರೈನಾ: ಕಳೆದ ಐಪಿಎಲ್ ಸೀಸನ್​ನಿಂದ ಹೊರಗುಳಿದಿದ್ದ ಸುರೇಶ್ ರೈನಾ ಅವರನ್ನು ಸಿಎಸ್​ಕೆ ಈ ಬಾರಿ ಕೂಡ ತಂಡದಲ್ಲೇ ಉಳಿಸಿಕೊಂಡಿದ್ದಾರೆ. ಪ್ರಸ್ತುತ ರೈನಾ ಅವರ ಸಂಭಾವನೆ 11 ಕೋಟಿ ರೂ. ಮುಂದಿನ ಸೀಸನ್​ನಲ್ಲೂ ಇದೇ ಮೊತ್ತ ಪಡೆಯುವುದರೊಂದಿಗೆ 13 ಆವೃತ್ತಿಗಳಲ್ಲಿ ರೈನಾ 110 ಕೋಟಿ ರೂ. ಸಂಭಾವನೆ ಪಡೆದ ಆಟಗಾರ ಎನಿಸಿಕೊಳ್ಳಲಿದ್ದಾರೆ. ಅಲ್ಲದೆ 100 ಕೋಟಿ ಸಂಭಾವನೆ ಪಡೆದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ವಿರಾಟ್ ಕೊಹ್ಲಿ: ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಪ್ರಸ್ತುತ ಸಂಭಾವನೆ 17 ಕೋಟಿ ರೂ. ಕಳೆದ 13 ಸೀಸನ್​ಗಳಿಂದ ಆರ್​ಸಿಬಿ ಪರ ಕಣಕ್ಕಿಳಿದ ಕೊಹ್ಲಿ ಒಟ್ಟಾರೆ ಪಡೆದಿರುವ ಮೊತ್ತ 126.2 ಕೋಟಿ ರೂ.

ರೋಹಿತ್ ಶರ್ಮಾ: ಹಿಟ್​ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಐಪಿಎಲ್​ನಲ್ಲಿ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್​ ತಂಡವನ್ನು ಪ್ರತಿನಿಧಿಸಿದ್ದಾರೆ. ಐದು ಬಾರಿ ಮುಂಬೈ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿರುವ ರೋಹಿತ್ ಶರ್ಮಾ ಅವರ ಪ್ರಸ್ತುತ ಸಂಭಾವನೆ 15 ಕೋಟಿ ರೂ. ಅಲ್ಲದೆ ಕಳೆದ 13 ಸೀಸನ್​ ಮೂಲಕ ರೋಹಿತ್ ಶರ್ಮಾ ಪಡೆದಿರುವ ಸಂಭಾವನೆ 131.6 ಕೋಟಿ ರೂ. ಈ ಮೂಲಕ ಅತೀ ಹೆಚ್ಚು ಸಂಭಾವನೆ ಪಡೆದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.

ಮಹೇಂದ್ರ ಸಿಂಗ್ ಧೋನಿ: ಕೂಲ್ ಕ್ಯಾಪ್ಟನ್ ಖ್ಯಾತಿಯ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರೈಸಿಂಗ್ ಪುಣೆ ಜೈಂಟ್ಸ್ ತಂಡಗಳ ಪರ ಆಡಿದ್ದಾರೆ. ಅದರಲ್ಲೂ ಆರಂಭದಿಂದಲೂ ಸಿಎಸ್​ಕೆ ತಂಡದ ನಾಯಕರಾಗಿರುವ ಧೋನಿ 3 ಬಾರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಪ್ರಸ್ತುತ ಧೋನಿ ಪಡೆಯುತ್ತಿರುವ ಸಂಭಾವನೆ 15 ಕೋಟಿ. ಕಳೆದ 13 ಸೀಸನ್​ಗಳಿಂದ ಕೂಲ್ ಕ್ಯಾಪ್ಟನ್ ಪಡೆದಿರುವ ಒಟ್ಟಾರೆ ಸಂಭಾವನೆ ಬರೋಬ್ಬರಿ 137.8 ಕೋಟಿ ರೂ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆದ ಆಟಗಾರ ಎಂಬ ದಾಖಲೆ ಧೋನಿ ಹೆಸರಿನಲ್ಲಿದೆ.

Comments are closed.