ಕ್ರೀಡೆ

ಕ್ರಿಕೆಟಿಗ ಪಾರ್ಥಿವ್‌ ಪಟೇಲ್ ನಿವೃತ್ತಿ ಘೋಷಣೆ: ಹರ್ಭಜನ್‌ ಸಿಂಗ್‌ ರೊಬ್ಬರನ್ನು ಬಿಟ್ಟು 2003ರ ಏಕದಿನ ವಿಶ್ವಕಪ್‌ನಲ್ಲಿ ಆಡಿದ್ದ ಎಲ್ಲರೂ ನಿವೃತ್ತಿ

Pinterest LinkedIn Tumblr


ಮುಂಬೈ: 2003ರ ಏಕದಿನ ವಿಶ್ವಕಪ್‌ನಲ್ಲಿ ಪಾಲ್ಗೊಂಡ ಭಾರತ ಕ್ರಿಕೆಟ್‌ ತಂಡದಲ್ಲಿದ್ದ ಪಾರ್ಥಿವ್‌ ಪಟೇಲ್ ‌ಕೂಡಾ ವಿದಾಯ ಹೇಳಿದರು. ಅಲ್ಲಿಗೆ ಹರ್ಭಜನ್‌ ಸಿಂಗ್‌ ರೊಬ್ಬರನ್ನು ಬಿಟ್ಟು ಆ ತಂಡದಲ್ಲಿದ್ದ ಎಲ್ಲರೂ ನಿವೃತ್ತಿ ಘೋಷಿಸಿದಂತಾಗಿದೆ.

2003ರ ವಿಶ್ವಕಪ್‌ ತಂಡದಲ್ಲಿದ್ದರೂ ಪಾರ್ಥಿವ್‌ ಆಡಲು ಅವಕಾಶ ಪಡೆದಿರಲಿಲ್ಲ. ಕಾರಣ ರಾಹುಲ್‌ ದ್ರಾವಿಡ್‌ ವಿಕೆಟ್‌ಕೀಪಿಂಗ್‌ ಹೊಣೆ ಹೊತ್ತುಕೊಂಡಿದ್ದರು.

ಸದ್ಯ ಹರ್ಭಜನ್‌ ಸಿಂಗ್‌ ಅತ್ಯಂತ ಹಿರಿಯ ಕ್ರಿಕೆಟಿಗರಲ್ಲೊಬ್ಬರು. ಅವರು ಕೊನೆಯ ಬಾರಿಗೆ ಭಾರತೀಯ ತಂಡದಲ್ಲಿ ಕಾಣಿಸಿಕೊಂಡಿದ್ದು 2016ರ ಟಿ20 ಪಂದ್ಯದಲ್ಲಿ. 2015ರಲ್ಲಿ ಕೊನೆಯ ಬಾರಿಗೆ ಟೆಸ್ಟ್‌ ಆಡಿದ್ದರು. ಅವರು 103 ಟೆಸ್ಟ್‌ ಆಡಿದ್ದು 417 ವಿಕೆಟ್‌ ಪಡೆದಿದ್ದಾರೆ.

236 ಏಕದಿನಗಳ ಮೂಲಕ 269, 28 ಟಿ20ಯಲ್ಲಿ 25 ವಿಕೆಟ್‌ ಪಡೆದಿದ್ದಾರೆ. ಸದ್ಯ ಅವರು ಐಪಿಎಲ್‌ನಲ್ಲಿ ಇದ್ದಾರೆ. ಆದರೆ ಮುಂದಿನ ಐಪಿಎಲ್‌ನಲ್ಲಿ ಆಡುತ್ತಾರಾ ಇಲ್ಲವಾ ಗೊತ್ತಿಲ್ಲ. ಹಾಗೆಯೇ ಭಾರತ ತಂಡಕ್ಕೆ ಮರಳುವುದಂತೂ ಕನಸಿನ ಮಾತು.

2003ರ ಭಾರತ ವಿಶ್ವಕಪ್ ತಂಡ
ಸೌರವ್ ಗಂಗೂಲಿ, ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ಅಜಿತ್ ಅಗರ್ಕರ್, ಸಂಜಯ್ ಬಂಗಾರ್, ಮೊಹಮ್ಮದ್ ಕೈಫ್, ಜಹೀರ್ ಖಾನ್, ಅನಿಲ್ ಕುಂಬ್ಳೆ, ದಿನೇಶ್ ಮೊಗಿಯಾ, ಆಶಿಷ್ ನೆಹ್ರಾ, ಪಾರ್ಥೀವ್ ಪಟೇಲ್, ವೀರೆಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಜಾವಗಲ್ ಶ್ರೀನಾಥ್.

Comments are closed.