ಕ್ರೀಡೆ

ಕೊರೋನಾ ಕಾಲಘಟ್ಟದಲ್ಲಿ ಥಾಮಸ್‌ ಮತ್ತು ಉಬೆರ್‌ ಕಪ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿ ಎಷ್ಟು ಸುರಕ್ಷಿತ: ಸೈನಾ ನೆಹ್ವಾಲ್‌

Pinterest LinkedIn Tumblr


ಹೈದರಾಬಾದ್‌: ಕೊರೋನಾದ ಸಂದರ್ಭದಲ್ಲಿ ಡೆನ್ಮಾರ್ಕ್‌ನಲ್ಲಿ ನಡೆಯಲಿರುವ ಥಾಮಸ್‌ ಮತ್ತು ಉಬೆರ್‌ ಕಪ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಗಳು ಎಷ್ಟು ಸುರಕ್ಷಿತ ಎಂದು ಸೈನಾ ನೆಹ್ವಾಲ್‌ ವಿಶ್ವ ಬ್ಯಾಡ್ಮಿಂಟನ್‌ ಒಕ್ಕೂಟವನ್ನು ಪ್ರಶ್ನಿಸಿದ್ದಾರೆ.

“ಕೋವಿಡ್ ಭೀತಿಯಿಂದ 7 ದೇಶಗಳು ಈ ಕೂಟಗಳಿಂದ ಹಿಂದೆ ಸರಿದಿವೆ. ಇಂಥ ಸಮಯದಲ್ಲಿ ಈ ಪಂದ್ಯಾವಳಿಗಳನ್ನು ನಡೆಸುವುದು ಸುರಕ್ಷಿತವೇ” ಎಂಬುದಾಗಿ ಸೈನಾ ನೆಹ್ವಾಲ್‌ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದಾರೆ.

ದಕ್ಷಿಣ ಕೊರಿಯಾ, ಥಾಯ್ಲೆಂಡ್‌, ಇಂಡೋನೇಶ್ಯದಂಥ ಬಲಿಷ್ಠ ಬ್ಯಾಡ್ಮಿಂಟನ್‌ ರಾಷ್ಟ್ರಗಳು ಈ ಕೂಟದಲ್ಲಿ ಭಾಗವಹಿಸದಿರಲು ತೀರ್ಮಾನಿಸಿವೆ. ಚೀನ ಮತ್ತು ಜಪಾನ್‌ ಕೂಡ ಹಿಂದೆ ಸರಿಯುವ ಯೋಜನೆಯಲ್ಲಿವೆ. ಹೀಗಾಗಿ ಬದಲಿಯಾಗಿ ಹಾಂಕಾಂಗ್‌, ಸಿಂಗಾಪುರ್‌, ಫಿನ್ಲಂಡ್‌, ಸ್ವೀಡನ್‌ ಮೊದಲಾದ ತಂಡಗಳನ್ನು ಆಡಿಸಲು ಬಿಡಬ್ಲ್ಯುಎಫ್ ನಿರ್ಧರಿಸಿದೆ.

Comments are closed.