ಕ್ರೀಡೆ

ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ ಅಂತರರಾಷ್ಟ್ರೀಯ ಕ್ರಿಕೆಟಿಗ

Pinterest LinkedIn Tumblr


ಸಿಡ್ನಿ: ಆರ್‌ಸಿಬಿ ತಂಡದಲ್ಲಿ ಮಿಂಚು ಹರಿಸಿದ್ದ ಅಂತರರಾಷ್ಟ್ರೀಯ ಕ್ರಿಕೆಟಿಗ, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ ಲ್ಯೂಕ್ ಪೊಮರ್ಸ್‌ಬಾಚ್ ಈಗ ಕಳ್ಳನಾಗಿದ್ದಾನೆ.

ಕಳ್ಳತನದ ಪ್ರಕರಣದಲ್ಲಿ ಸಿಡ್ನಿ ಪೊಲೀಸರು ಲ್ಯೂಕ್ ಪೊಮರ್ಸ್‌ಬಾಚ್ ಬಂಧಿಸಿದ್ದಾರೆ. ಈ ಹಿಂದೆ ಲ್ಯೂಕ್ ಪೊಮರ್ಸ್‌ಬಾಚ್ ಬೈಕ್ ಕಳ್ಳತನ, ಮದ್ಯದಂಗಡಿಯಲ್ಲಿ ಲಿಕ್ಕರ್ ಕಳ್ಳತನ ಮಾಡಿ ಸಿಕ್ಕಿ ಹಾಕಿಕೊಂಡಿದ್ದರು. ಈಗ ಮತ್ತೊಮ್ಮೆ ಕಳ್ಳತನ ಮಾಡಿ ಜೈಲು ಸೇರಿದ್ದಾರೆ. 2014ರಲ್ಲಿ ಕ್ರಿಕೆಟ್‍ಗೆ ವಿದಾಯ ಹೇಳಿದ್ದ ಕ್ರಿಕೆಟಿಗ ಕೆಟ್ಟ ಚಟಗಳ ದಾಸನಾಗಿದ್ದು, ಮನೆ ಕೂಡ ಇಲ್ಲವಾಗಿದೆ. ಕಾರಿನಲ್ಲಿಯೇ ವಾಸಮಾಡುತ್ತಿದ್ದರು.

ಪಶ್ಚಿಮ ಆಸ್ಟ್ರೇಲಿಯಾ ಕ್ರಿಕೆಟಿಗ ಲ್ಯೂಕ್ ಪೊಮರ್ಸ್‌ಬಾಚ್ ಟಿ20 ವಲಯಗಳಲ್ಲಿ ಚಿರಪರಿಚಿತ ಹೆಸರು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ಆಯ್ಕೆಯಾದ ಅವರು ತಮ್ಮ ತಾಯ್ನಾಡಿನಲ್ಲಿ ಬಿಗ್ ಬ್ಯಾಷ್ ಲೀಗ್ ವಿಜೇತ ತಂಡದ ಸದಸ್ಯರಾಗಿದ್ದರು. ಆದರೆ 35ರ ಹರೆಯದ ಅವರು ಅನೇಕ ಕಳ್ಳತನ ಪ್ರಕರಣಕ್ಕೆ ಗುರಿಯಾಗಿದ್ದಾರೆ.

Comments are closed.