ಕ್ರೀಡೆ

ಈ ಬಾರಿಯ ಐಪಿಎಲ್ ಹರಾಜಿನಲ್ಲಿ 14 ವರ್ಷದ ಪೋರ ! ಆಡುವ ತಂಡ ಯಾವುದು ಗೊತ್ತೇ…?

Pinterest LinkedIn Tumblr

ಬೆಂಗಳೂರು: ಐಪಿಎಲ್ 13ನೇ ಆವೃತ್ತಿಯ ಹರಾಜಿಗೆ ದಿನಗಣನೆ ಶುರುವಾಗಿದೆ. ಇದೇ ಡಿಸೆಂಬರ್ 19 ರಂದು ಮೊದಲ ಬಾರಿ ಕೋಲ್ಕತ್ತಾ ಹರಾಜು ಪ್ರಕ್ರಿಯೆಗೆ ತಯಾರಾಗಿದೆ. ಎಲ್ಲ ಫ್ರಾಂಚೈಸಿ ಭರ್ಜರಿ ಸಿದ್ಧತೆಯಲ್ಲಿ ತೊಡಗಿಕೊಂಡಿವೆ.

ಈಗಾಗಲೇ ಐಪಿಎಲ್ ಮಂಡಳಿ 971 ಆಟಗಾರರು ಸಲ್ಲಿಸದ ಅರ್ಜಿಯನ್ನು ಶಾರ್ಟ್​​ ಲಿಸ್ಟ್​ ಮಾಡಿ 332ಕ್ಕೆ ಇಳಿಸಿದೆ. ಖಾಲಿ ಇರುವ 73 ಸ್ಥಾನಕ್ಕಾಗಿ 332 ಆಟಗಾರರು ಕಾದಾಟ ನಡೆಸಲಿದ್ದಾರೆ. ಈ ಪೈಕಿ ಅತಿ ಕಿರಿಯ ವಯಸ್ಸಿನ ಅಫ್ಘಾನಿಸ್ತಾನ ಆಟಗಾರನ ಮೇಲೆ ಕೆಲವು ಫ್ರಾಂಚೈಸಿ ಕಣ್ಣಿಟ್ಟಿದೆ.

ಅಫ್ಘಾನಿಸ್ತಾನ ಅಂಡರ್-19 ತಂಡದಲ್ಲಿ ಸಂಚಲನ ಸೃಷ್ಟಿಸಿದ್ದ 14 ವರ್ಷದ ಪೋರ ನೂರ್ ಅಹ್ಮದ್ ಐಪಿಎಲ್ ಹರಾಜಿನಲ್ಲಿ ಲಭ್ಯವಿರುವ ಅತಿ ಕಿರಿಯ ಆಟಗಾರ. ಕಳೆದ ತಿಂಗಳು ಭಾರತ ಅಂಡರ್-19 ತಂಡದ ವಿರುದ್ಧ ಅಹ್ಮದ್ ಅವರು ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 9 ವಿಕೆಟ್ ಕಿತ್ತು ಭಾರೀ ಸುದ್ದಿಯಾಗಿದ್ದರು.

ಹೀಗಾಗಿ ಈ ಬಾರಿಯ ಐಪಿಎಲ್​ನಲ್ಲಿ ಇವರು ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ರಾಜಸ್ಥಾನ್ ರಾಯಲ್ಸ್ ತಂಡ ಇವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವ ಅಂದಾಜಿನಲ್ಲಿದೆ. ಇತ್ತೀಚೆಗಷ್ಟೆ ​​ ಅಹ್ಮದ್ ಅವರನ್ನು ಆರ್​ಆರ್ ತಂಡ ಸಂಪರ್ಕಿಸಿ ಟ್ರಯಲ್ ಕೂಡ ನಡೆಸಿದೆ.

ಸ್ಯಾಂಡಲ್​ವುಡ್​​ ನಟಿಯೊಂದಿಗೆ ಡೇಟಿಂಗ್​ನಲ್ಲಿದ್ದಾರೆ ರಿಷಭ್ ಪಂತ್? ಜನವರಿ 3, 2005 ರಂದು ಜನಿಸಿದ ನೂರ್ ಅಹ್ಮದ್ ಸ್ಲೋ ಲೆಫ್ಟ್​ ಆರ್ಮ್​ ಚೈನಾಮನ್ ಬೌಲರ್ ಆಗಿದ್ದಾರೆ. ಟಿ-20 ಈವರೆಗೆ 7 ಪಂದ್ಯಗಳನ್ನು ಇವರು ಆಡಿದ್ದು 8 ವಿಕೆಟ್ ಕಿತ್ತಿದ್ದಾರೆ. ಕೇವಲ 12 ರನ್ ನೀಡಿ 3 ವಿಕೆಟ್ ಪಡೆದಿರುವುದು ಅಹ್ಮದ್​ರ ಶ್ರೇಷ್ಠ ಸಾಧನೆಯಾಗಿದೆ.

ಈ ಬಾರಿಯ ಐಪಿಎಲ್ ಹರಾಜಿಗೆ 7 ವಿದೇಶಿ ಆಟಗಾರರು ತಮ್ಮ ಮೂಲ ಬೆಲೆಯನ್ನು 2 ಕೋಟಿ ಎಂದು ತಿಳಿಸಿದ್ದಾರೆ. ಇನ್ನು 9 ಆಟಗಾರರು 1.5 ಕೋಟಿಗೆ ತಮ್ಮ ಬೆಲೆಯನ್ನು ನಿಗದಿ ಮಾಡಿಕೊಂಡಿದ್ದಾರೆ.

ಆಸ್ಟ್ರೇಲಿಯಾದ ಆಟಗಾರರಾದ ಪ್ಯಾಟ್‌ ಕಮಿನ್ಸ್‌, ಜಾಶ್‌ ಹೇಝಲ್‌ವುಡ್‌, ಕ್ರಿಸ್‌ ಲಿನ್‌, ಮಿಚೆಲ್‌ ಮಾರ್ಷ್‌ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ದಕ್ಷಿಣ ಆಫ್ರಿಕಾದ ಡೇಲ್‌ ಸ್ಟೇನ್‌ ಮತ್ತು ಶ್ರೀಲಂಕಾದ ಏಂಜಲೊ ಮ್ಯಾಥ್ಯೂಸ್‌ 2 ಕೋಟಿ ಲಿಸ್ಟ್‌ನಲ್ಲಿರುವ ಆಟಗಾರರು.

ಇನ್ನು 1.5 ಕೋಟಿ ರೂ. ಮೂಲ ಬೆಲೆಯ ಪಟ್ಟಿಯಲ್ಲಿ ರಾಬಿನ್‌ ಉತ್ತಪ್ಪ, ಶಾನ್‌ ಮಾರ್ಷ್‌, ಕೇನ್ ರಿಚರ್ಡ್ಸನ್‌, ಐಯಾನ್ ಮಾರ್ಗನ್‌, ಜೇಸನ್‌ ರಾಯ್‌, ಕ್ರಿಸ್‌ ವೋಕ್ಸ್‌, ಡೇವಿಡ್‌ ವಿಲ್ಲೀ, ಕ್ರಿಸ್‌ ಮಾರಿಸ್‌ ಮತ್ತು ಕೈಲ್‌ ಅಬಟ್‌ ಈ ಪಟ್ಟಿಯಲ್ಲಿ ಇರುವ ಸ್ಟಾರ್‌ ಆಟಗಾರರಾಗಿದ್ದಾರೆ.

ಕೆಕೆಆರ್​ನಿಂದ ಬಿಡುಗಡೆಯಾಗಿರುವ ಪಿಯೂಷ್ ಚಾವ್ಲಾ, ಯೂಸುಫ್ ಪಠಾಣ್ (ಸನ್​ರೈಸರ್ಸ್​​), ಜೈದೇವ್ ಉನಾದ್ಕಟ್ (ಆರ್​ಆರ್​) ಅವರ ಮೂಲಬೆಲೆ 1 ಕೋಟಿ ರೂ. ಆಗಿದೆ. 183 ಹೊಸ ಆಟಗಾರು 20 ಲಕ್ಷ, 40 ಲಕ್ಷದ 7 ಆಟಗಾರರು ಹಾಗೂ 30 ಲಕ್ಷದ 8 ಆಟಗಾರರಿದ್ದಾರೆ.

Comments are closed.