ಕ್ರೀಡೆ

ಆಸಿಸ್ ಮಾಜಿ ನಾಯಕ ಸ್ಟೀವ್ ಸ್ಮಿತ್ ಹಿಂದಿಕ್ಕಿ ಮತ್ತೆ ನಂ.1 ಸ್ಥಾನ ಪಡೆದ ವಿರಾಟ್ ಕೊಹ್ಲಿ!

Pinterest LinkedIn Tumblr


ನವದೆಹಲಿ: ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತೆ ನಂ.1 ಪಟ್ಟ ಅಲಂಕರಿಸಿದ್ದಾರೆ. ಇದರೊಂದಿಗೆ ವೈಟ್​ ಜೆರ್ಸಿಯಲ್ಲಿ ಮತ್ತೆ ಸಾಮ್ರಾಟನಾಗಿ ಮೆರೆದಾಡಿದ್ದಾರೆ.

ಐಸಿಸಿ ಬಿಡುಗಡೆ ಮಾಡಿರುವ ಟೆಸ್ಟ್ ರ‍್ಯಾಕಿಂಗ್ನಲ್ಲಿ ರನ್ ಮಷೀನ್ ಕೊಹ್ಲಿ ಒಟ್ಟು 928 ಅಂಕಗಳೊಂದಿಗೆ ಆಸಿಸ್ ಮಾಜಿ ನಾಯಕ ಸ್ಟೀವ್ ಸ್ಮಿತ್ ಅವರನ್ನು ಹಿಂದಿಕ್ಕುವ ಮೂಲಕ ಮತ್ತೆ ನಂ.1 ಸ್ಥಾನ ಪಡೆದರು.

ಎರಡು ತಿಂಗಳ ಹಿಂದೆಯಷ್ಟೆ ವಿರಾಟ್ ಕೊಹ್ಲಿ ನಂ.1 ಪಟ್ಟದಿಂದ ಕೆಳಗಿಳಿದಿದ್ದರು. ಅಮಾನತು ಶಿಕ್ಷೆ ಮುಗಿಸಿ ಬಂದ ಆಸ್ಟ್ರೇಲಿಯಾ ತಂಡದ ಸ್ಟಾರ್ ಬ್ಯಾಟ್ಸ್​ಮನ್ ಸ್ವೀವ್ ಸ್ಮಿತ್ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ನಂ.1 ಪಟ್ಟ ಅಲಂಕರಿಸಿದ್ದರು.

ಆ್ಯಷಸ್ ಸರಣಿಯಲ್ಲಿ ರನ್ ಮಳೆ ಹೊಳೆ ಹರಿಸಿದ ಸ್ಮಿತ್ ನಾಲ್ಕು ಟೆಸ್ಟ್ ಪಂದ್ಯಗಳಿಂದ 2 ಶತಕ ಒಂದು ದ್ವಿಶತಕ ಮತ್ತು 3 ಅರ್ಧ ಶತಕದ ನೆರವಿನಿಂದ ಒಟ್ಟು 774 ರನ್ ಕಲೆ ಹಾಕಿದ್ರು. ಇದರೊಂದಿಗೆ ಸ್ಮಿತ್ ಮತ್ತೆ ಟೆಸ್ಟ್ ಸಾಮ್ರಾಟನಾಗಿ ಉಳಿದಿದ್ದರು.

ಆಂಗ್ಲರ ವಿರುದ್ಧ ಅಬ್ಬರಿಸಿ ಬೊಬ್ಬಿರಿದ ಸ್ಟೀವ್ ಸ್ಮಿತ್ ಇಡೀ ಕ್ರಿಕೆಟ್ ಜಗತ್ತು ತಮ್ಮತ್ತ ನೋಡುವಂತೆ ಮಾಡಿದ್ದರು. ಆದರೆ, ಇದೀಗ ತವರಿನಲ್ಲಿ ಪಾಕ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಫ್ಲಾಪ್ ಆಗಿದ್ದಾರೆ. ಬ್ರಿಸ್ಬೇನ್​ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಮಿತ್ ಕೇವಲ 4 ರನ್​ ಗಳಿಸಿದರು.

ನಂತರ ಅಡಿಲೇಡ್​ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸ್ಮಿತ್ 36 ರನ್ ಕಲೆ ಹಾಕಿ ಮತ್ತೆ ಫ್ಲಾಪ್ ಆದ್ರು. ಇದರ ಪರಿಣಾಮವೇ ಸ್ಮಿತ್ ಐಸಿಸಿ ಟೆಸ್ಟ್ ಱಂಕಿಂಗ್​ನಲ್ಲಿ ಅಂಕ ಕಳೆದುಕೊಂಡು ನಂ.1 ಪಟ್ಟವನ್ನು ಕಳೆದುಕೊಳ್ಳಬೇಕಾಯಿತು.

ನಂ.1 ಪಟ್ಟ ಕಳೆದುಕೊಂಡ ಕೊಹ್ಲಿ ಸುಮ್ಮನ್ನೆ ಕುಳಿತುಕೊಳ್ಳಲಿಲ್ಲ. ವೈಟ್ ಜೆರ್ಸಿಯಲ್ಲಿ ನಂ.1 ಪಟ್ಟ ಮರಳಿ ಪಡೆಯಬೇಕೆಂದು ಹಟ ಹಿಡಿದ ಕೊಹ್ಲಿ ತವರಿನಲ್ಲಿ ಸೌತ್ ಆಫ್ರಿಕಾ ಮತ್ತು ಬಾಂಗ್ಲಾ ವಿರುದ್ಧ ಅಬ್ಬರಿಸಿದರು. ಹರಿಣಗಳ ವಿರುದ್ಧ ಕೊಹ್ಲಿ ಮೂರು ಪಂದ್ಯಗಳಿಂದ ಒಂದು ದ್ವಿಶತಕ ಸೇರಿದಂತೆ ಒಟ್ಟು 317 ರನ್ ಕಲೆ ಹಾಕಿದ್ರೆ. ನಂತರ ಬಾಂಗ್ಲಾ ವಿರುದ್ಧ ನಡೆದ ಐತಿಹಾಸಿಕ ಹೊನಲು ಬೆಳಕಿನ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಹೊಸ ದಾಖಲೆ ಬರೆದಿದರು

ಈ ಪರ್ಫಾಮನ್ಸ್ ಕೊಹ್ಲಿಯನ್ನ ಮತ್ತೆ ನಂ.1 ಅಲಂಕರಿಸುವಂತೆ ಮಾಡಿದೆ. ವಿರಾಟ್ ಕೊಹ್ಲಿ ಕಳೆದುಕೊಂಡಿದ್ದ ಸ್ಥಾನವನ್ನು ಮರಳಿ ಪಡೆದಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಇನ್ನಲ್ಲದ ಖುಷಿ ನೀಡಿದೆ.

Comments are closed.