ಕ್ರೀಡೆ

ಮಾನಸಿಕ ಖಿನ್ನತೆ: ಪಂದ್ಯಗಳಿಂದ ದೂರವುಳಿದ 21ರ ಆಟಗಾರ್ತಿ

Pinterest LinkedIn Tumblr


ಮೆಲ್ಬೋರ್ನ್: ಆಸ್ಟ್ರೇಲಿಯಾದ ಮಹಿಳಾ ಆಟಗಾರ್ತಿ ಸೋಫಿ ಮೊಲಿನೆಕ್ಸ್ ಮಾನಸಿಕ ಖಿನ್ನತೆಯ ಕಾರಣದಿಂದ ಬಿಗ್ ಬಾಶ್ ಲೀಗ್ ನ ಪಂದ್ಯಗಳಿಂದ ದೂರವುಳಿಯಲು ನಿರ್ಧರಿಸಿದ್ದಾರೆ.

ಮೆಲ್ಬೋರ್ನ್ ರೆನಿಗೇಡ್ಸ್ ತಂಡದ ಆಟಗಾರ್ತಿಯಾಗಿರುವ 21ರ ಹರೆಯದ ಸೋಫೀ ಮಾನಸಿಕ ಆರೋಗ್ಯ ಸರಿಯಿಲ್ಲದ ಕಾರಣ ಸ್ವಲ್ಪ ದಿನಗಳ ಕಾಲ ಕ್ರಿಕೆಟ್ ನಿಂದ ದೂರವುಳಿಯುವುದಾಗಿ ತಿಳಿಸಿದ್ದಾರೆ.

ಆಸೀಸ್ ಕ್ರಿಕೆಟರ್ ಗಳಾದ ಗ್ಲೆನ್ ಮ್ಯಾಕ್ಸ ವೆಲ್ ಮತ್ತು ನಿಕ್ ಮ್ಯಾಡಿನ್ಸನ್ ಕೂಡಾ ಕೆಲ ದಿನಗಳ ಹಿಂದೆ ಇದೇ ಕಾರಣ ನೀಡಿ ಕ್ರಿಕೆಟ್ ನಿಂದ ಸ್ವಲ್ಪ ದಿನಗಳ ಕಾಲ ದೂರವಾಗಲು ನಿರ್ಧರಿಸಿದ್ದರು.

ಸೋಫಿ ಆರೋಗ್ಯದ ಕಾರಣಕ್ಕೆ ಕ್ರಿಕೆಟ್ ನಿಂದ ಬ್ರೇಕ್ ಪಡೆಯಲು ಇಚ್ಚಿಸಿದ್ದಾರೆ. ಇದಕ್ಕೆ ನಮ್ಮ ಬೆಂಬಲವಿದೆ. ನಮಗೆ ನಮ್ಮ ಆಟಗಾರರ ಹಿತ ಮುಖ್ಯ ಎಂದು ಆಸೀಸ್ ಮಹಿಳಾ ತಂಡದ ವೈದ್ಯೆ ಪಿಪ್ ಇಂಗ್ ಹೇಳಿದ್ದಾರೆ.

Comments are closed.