ಕ್ರೀಡೆ

ಬಿಡಬ್ಲ್ಯುಎಫ್‌ ವಿಶ್ವ ಚಾಂಪಿಯನ್‌ಶಿಪ್‌; ಕಂಚಿನ ಪದಕ ಗೆದ್ದ ಸಾಯ್ ಪ್ರಣೀತ್‌

Pinterest LinkedIn Tumblr


ಬಾಸೆಲ್: ಸ್ವಿಜರ್ಲೆಂಡ್‌ನಲ್ಲಿ ನಡೆಯುತ್ತಿರುವ ಬಿಡಬ್ಲ್ಯು ವಿಶ್ವ ಚಾಂಪಿಯನ್‌ಶಿಪ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿರುವ ಭಾರತದ ಬಿ. ಸಾಯ್ ಪ್ರಣೀತ್ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಇದಕ್ಕೂ ಮೊದಲು, ವಿಶ್ವ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಆಟಗಾರನೊಬ್ಬ ಕಂಚಿನ ಪದಕ ಗೆದ್ದಿದ್ದು 3 ದಶಕಗಳ ಹಿಂದೆ. 1983ರ ಆವೃತ್ತಿಯಲ್ಲಿ ದಿಗ್ಗಜ ಪ್ರಕಾಶ್‌ ಪಡುಕೋಣೆ ಕಂಚಿನ ಪದಕ ಗೆದ್ದ ಬಳಿಕ ಪುರುಷರ ಸಿಂಗಲ್ಸ್‌ನಲ್ಲಿ ಭಾರತೀಯರಾರ‍ಯರೂ ಪದಕದ ಬಳಿ ಸುಳಿದೇ ಇಲ್ಲ.

ಶನಿವಾರ ನಡೆದ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ ಪಂದ್ಯದಲ್ಲಿ ವಿಶ್ವದ ನಂಬರ್‌ ಒನ್‌ ಆಟಗಾರ ಜಪಾನ್‌ನ ಕೆಂಟೊ ಮೊಮೊಟೊ ಎದುರು 13-21, 8-21 ಗೇಮ್‌ಗಳಿಂದ ಸೋಲುವ ಮೂಲಕ ಪ್ರಣೀತ್‌ ಫೈನಲ್‌ಗೇರುವ ಅವಕಾಶ ಕಳೆದುಕೊಂಡರು. ಪ್ರಣೀತ್‌ ಅತ್ಯುತ್ತಮ ಪ್ರದರ್ಶನ ತೋರಿದರೂ, ವಿಶ್ವದ ಮುಂಚೂಣಿಯ ಆಟಗಾರನ ಮುಂದೆ ಅವರ ತಂತ್ರಗಳು ನಡೆಯಲಿಲ್ಲ.

ಪಂದ್ಯದ ಆರಂಭದಿಂದಲೇ ಅಗ್ರ ಶ್ರೇಯಾಂಕಿತ ಆಟಗಾರ ಸಾಯ್ ಮೇಲೆ ಅಧಿಪತ್ಯವನ್ನು ಸ್ಥಾಪಿಸಿದರು. ಇದರಿಂದಾಗಿ ಸಾಯ್‌ಗೆ ಪಂದ್ಯದಲ್ಲಿ ತಿರುಗಿ ಬೀಳಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪಂದ್ಯದಲ್ಲಿ ಹಿನ್ನಡೆ ಅನುಭವಿಸಿದರು.

ಈ ಮುನ್ನ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಹೆಮ್ಮೆಯ ಪಿವಿ ಸಿಂಧೂ ಪ್ರಶಸ್ತಿ ಸುತ್ತಿಗೆ ಪ್ರವೇಶಿಸುವ ಮೂಲಕ ಸಾಧನೆ ಮೆರೆದಿದ್ದಾರೆ.

Comments are closed.