ಕ್ರೀಡೆ

ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಹಾಶಿಮ್ ಆಮ್ಲಾ

Pinterest LinkedIn Tumblr

ದಕ್ಷಿಣ ಆಫ್ರಿಕಾದ ಪ್ರಾರಂಭಿಕ ಬ್ಯಾಟ್ಸ್‌ಮನ್ ಹಾಶಿಮ್ ಆಮ್ಲಾ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ.

ಆಮ್ಲ ತಮ್ಮ ವೃತ್ತಿಜೀವನದಲ್ಲಿ 124 ಟೆಸ್ಟ್ ಪಂದ್ಯಗಳಲ್ಲಿ 9282 ರನ್ ಗಳಿಸಿದ್ದರೆ 181 ಏಕದಿನ ಪಂದ್ಯಗಳಲ್ಲಿ 8113 ರನ್ ಗಳಿಸಿ ಇನಿಂಗ್ಸ್‌ಗೆ ಸರಾಸರಿ 49.5 ರನ್ ಕಲೆ ಹಾಕಿದ್ದರು.

ಡರ್ಬನ್ ಮೂಲದ ಆಟಗಾರ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 2000, 3000, 4000, 5000, 6000 ಮತ್ತು 7000 ರನ್ ಪೂರೈಸಿದ ಆಟಗಾರನೆಂಬ ಕೀರ್ತಿಗೆ ಭಾಜನರಾಗಿದ್ದರು.

ಅಲ್ಲದೆ ಆಮ್ಲಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಔಟಾಗದೆ 311 ರನ್ ಗಳಿಸಿಕೊಂಡಿದ್ದದ್ದು ಇದು ಕ್ಷಿಣ ಆಫ್ರಿಕಾದ ಯಾವುದೇ ಬ್ಯಾಟ್ಸ್‌ಮನ್ ಗಳಿಸಿದ ಗರಿಷ್ಠ ವೈಯಕ್ತಿಕ ಸ್ಕೋರ್ ಎಂದು ದಾಖಲಾಗಿದೆ.

Comments are closed.