ಕ್ರೀಡೆ

ಹರ್ಯಾಣದ ಯುವತಿ ಜೊತೆ ಪಾಕ್‌ ಕ್ರಿಕೆಟಿಗನ ಮದುವೆ?

Pinterest LinkedIn Tumblr


ಸೋನೆಪತ್‌: ಭಾರತ ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ಪಾಕಿಸ್ತಾನ ಕ್ರಿಕೆಟಿಗ ಶೋಯಿಬ್‌ ಮಲಿಕ್‌ ವಿವಾಹವಾಗಿ ಪಾಕ್‌ ನೆಲದ ಸೊಸೆಯಾಗಿದ್ದರು. ಇದೀಗ ಈ ಸಾಲಿಗೆ ಮತ್ತೂರ್ವ ಭಾರತೀಯ ಮಹಿಳೆ ಸೇರುವ ಸಾಧ್ಯತೆ ಇದೆ.

ಪಾಕಿಸ್ತಾನ ಕ್ರಿಕೆಟಿಗ ಹಸನ್‌ ಅಲಿ ಹರ್ಯಾಣ ಮೂಲದ ಶಾಮಿಯಾ ಅರ್ಜೂ ಎಂಬ ಹುಡುಗಿಯನ್ನು ವಿವಾಹವಾಗುವ ಕುರಿತಂತೆ ಮಾತುಕತೆ ನಡೆದಿದೆ. ಆದರೆ ಅದಿನ್ನೂ ಅಧಿಕೃತವಾಗಿಲ್ಲ. 2 ಕುಟುಂಬಗಳ ನಡುವೆ ಮಾತುಕತೆ ನಡೆಯುತ್ತಿದೆ.

ಶೀಘ್ರದಲ್ಲೇ ಅಧಿಕೃತವಾಗಿ ತಿಳಿಸುವುದಾಗಿ ಹಸನ್‌ ಅಲಿ ಟ್ವೀಟರ್‌ನಲ್ಲಿ ತಿಳಿಸಿದ್ದಾರೆ. ಶಾಮಿಯಾ ದುಬೈ ಏರ್‌ಲೈನ್ಸ್‌ನಲ್ಲಿ ಫ್ಲೈಟ್ ಎಂಜಿನೀಯರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಇಂಗ್ಲೆಂಡ್‌ನ‌ಲ್ಲಿ ಇಂಜಿನೀಯರ್‌ ವ್ಯಾಸಂಗ ಮಾಡಿದ್ದರು ಎಂದು ಹೇಳಲಾಗಿದೆ.

Comments are closed.