ಕ್ರೀಡೆ

ನಾಟೌಟ್ ಆಗಿದ್ದರೂ ಕ್ರಿಸ್ ಬಿಟ್ಟು ತೆರಳಿದ ಯುವರಾಜ್ ಸಿಂಗ್ ! ವಿಡಿಯೋ ವೈರಲ್!

Pinterest LinkedIn Tumblr

ಟೀಂ ಇಂಡಿಯಾದ ಕ್ರಿಕೆಟಿಗ ಯುವರಾಜ್ ಸಿಂಗ್ ನಿವೃತ್ತಿ ಬಳಿಕ ಇದೀಗ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಬ್ಯಾಟ್ ಹಿಡಿದಿದ್ದು ಆದರೆ ಸಿಕ್ಕ ಅವಕಾಶವನ್ನು ಯುವಿ ಕೈಚೆಲ್ಲಿದ್ದಾರೆ.

ಗ್ಲೋಬಲ್ ಟಿ20 ಕೆನಡಾ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಟೊರೊಂಟೋ ನ್ಯಾಷನಲ್ಸ್ ಪರ ಆಡುತ್ತಿದ್ದು ವ್ಯಾಂಕವರ್ ನೈಟ್ಸ್ ವಿರುದ್ಧದ ಪಂದ್ಯದಲ್ಲಿ 27 ಎಸೆತಗಳಲ್ಲಿ 14 ರನ್ ಬಾರಿಸಿ ಆಡುತ್ತಿದ್ದರು. ಈ ವೇಳೆ ಔಟ್ ಎಂದು ತಪ್ಪಾಗಿ ಅರ್ಥೈಸಿ ಅಂಪೈರ್ ನ್ನು ನೋಡದೆ ಪೆವಿಲಿಯನ್ ಸೇರಿದರು.

ವ್ಯಾಂಕವರ್ ನೈಟ್ಸ್ ತಂಡದ ಕೆನಡಿಯನ್ ರಿಜ್ವಾನ್ ಚೀಮಾ ಅವರ ಬೌಲಿಂಗ್ ನಲ್ಲಿ ಯುವರಾಜ್ ಸಿಂಗ್ ಬಿರುಸಿನ ಹೊಡೆತಕ್ಕೆ ಮುಂದಾದರು. ಆದರೆ ಚೆಂಡು ಮಿಸ್ ಆಗಿ ಕೀಪರ್ ಕೈಸೇರುವುದಿತ್ತು. ಆದರೆ ಚೆಂಡು ಕೈಗೆ ತಗುಲಿ ವಿಕೆಟ್ ಗೆ ಬಡೆಯಿತು. ಈ ವೇಳೆ ಯುವರಾಜ್ ಸಿಂಗ್ ಕ್ರಿಸ್ ಒಳಗೆ ಇದ್ದರು. ಆದರೆ ಇದನ್ನೆಲ್ಲ ಯುವಿ ಗಮನಿಸದೆ ಸ್ವಯಂಘೋಷಿತವಾಗಿ ಔಟ್ ಎಂದು ತೀರ್ಮಾನಿಸಿ ಕ್ರಿಸ್ ನಿಂದ ಹೊರ ನಡೆದಿದ್ದಾರೆ.

Comments are closed.