ಕ್ರೀಡೆ

‘ಮಂಕಡ್ ರನೌಟ್’ ನಂತರ ಈಗ ‘ಕುತಂತ್ರ’ ಬೌಲಿಂಗ್ ಮಾಡಿ ವ್ಯಾಪಕ ಟೀಕೆಗೆ ಗುರಿಯಾದ ಅಶ್ವಿನ್ ! ವಿಡಿಯೋ ನೋಡಿ…

Pinterest LinkedIn Tumblr

ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್)ನಲ್ಲಿ ನಾಯಕನ ಸ್ಥಾನದಲ್ಲಿದ್ದೂ ಮಂಕಡ್ ರನೌಟ್ ಮಾಡಿ ಟೀಕೆಗೆ ಗುರಿಯಾಗಿದ್ದ ರವಿಚಂದ್ರನ್ ಅಶ್ವಿನ್ ಇದೀಗ ಟಿಎನ್‌ಪಿಎಲ್ ನಲ್ಲಿ ವಿಚಿತ್ರ ರೀತಿಯಲ್ಲಿ ಬೌಲಿಂಗ್ ಮಾಡಿ ವಿಕೆಟ್ ಪಡೆದು ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

https://twitter.com/SriniMaama16/status/1153360508566659072

ತಮಿಳುನಾಡು ಪ್ರಿಮಿಯರ್ ಲೀಗ್ (ಟಿಎನ್‌ಪಿಎಲ್)ನಲ್ಲಿ ದಿಂಡಗಲ್ ಡ್ರಾಗನ್ಸ್ ಮತ್ತು ಮಧುರೈ ಪ್ಯಾಂಥರ್ಸ್ ನಡುವಿನ ಪಂದ್ಯ ಹಿಂದೆದೂ ಕಾಣದಂತ ಎಸೆತಕ್ಕೆ ಸಾಕ್ಷಿಯಾಗಿದೆ.

ದಿಂಡಗಲ್ ಡ್ರ್ಯಾಗನ್ಸ್ ವಿರುದ್ಧ ಗೆಲ್ಲಲು ಮಧುರೈ ತಂಡಕ್ಕೆ ಕೊನೆಯ ಓವರ್ ನಲ್ಲಿ 32 ರನ್ ಗಳನ್ನು ಪೇರಿಸಿಬೇಕಿತ್ತು. ಈ ವೇಳೆ ದಿಂಡಗಲ್ ಪರ ಕೊನೆಯ ಓವರ್ ಬೌಲಿಂಗ್ ಮಾಡಿದ ಆರ್ ಅಶ್ವಿನ್ ಕೇವಲ 2 ರನ್ ನೀಡಿ 2 ವಿಕೆಟ್ ಪಡೆದು ತಂಡಕ್ಕೆ ಗೆಲುವು ತಂದುಕೊಟ್ಟರು.

ಆದರೆ ಇದೇ ಓವರ್ ನಲ್ಲಿ ತಮ್ಮ ಬೌಲಿಂಗ್ ಶೈಲಿಯನ್ನು ಬಿಟ್ಟು ಚಿಕ್ಕ ಮಕ್ಕಳು ಚೆಂಡನ್ನು ಎಸೆಯುವಂತೆ ಬೌಲಿಂಗ್ ಮಾಡಿ ಎಲ್ ಕೆ ಆಕಾಶ್ ವಿಕೆಟ್ ಪಡೆದಿದ್ದು ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.

Comments are closed.