ಕ್ರೀಡೆ

ಬಾಟಲ್ ಕ್ಯಾಪ್ ಚಾಲೆಂಜನ್ನು ಸ್ವೀಕರಿಸಿದ ಶಿಖರ್ ಧವನ್ ಮಾಡಿದ್ದನ್ನು ನೋಡಿರೆ ಖಂಡಿತ ಶಾಕ್ ಆಗ್ತೀರಿ…!

Pinterest LinkedIn Tumblr

ನವದೆಹಲಿ: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ಗಾಯಗೊಂಡು ವಿಶ್ವಕಪ್ ಟೂರ್ನಿಯಿಂದ ಹೊರಗುಳಿದ್ದಿದ್ದರು. ಇದೀಗ ಮತ್ತೊಮ್ಮೆ ವಿಭಿನ್ನ ಕಾರಣಕ್ಕೆ ಧವನ್ ಬ್ಯಾಟ್ ಹಿಡಿದಿದ್ದಾರೆ.

ಸದ್ಯ ದೇಶಾದ್ಯಂತ ಬಾಟಲ್ ಕ್ಯಾಪ್ ಚಾಲೆಂಜ್ ನಡೆಯುತ್ತಿದೆ. ನಟ-ನಟಿಯರು ಸೇರಿದಂತೆ ಹಲವರು ಬಾಟಲ್ ಕ್ಯಾಪ್ ಚಾಲೆಂಜ್ ಮಾಡಿ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇದೀಗ ಇದೇ ಚಾಲೆಂಜ್ ಅನ್ನು ಧವನ್ ಬ್ಯಾಟ್ ಬೀಸುವ ಮೂಲಕ ಮಾಡಿದ್ದಾರೆ.

ಈ ಚಾಲೆಂಜ್ ಅನ್ನು ಯಶಸ್ವಿಗೊಳಿಸಿರುವ ಧವನ್ ಈ ಚಾಲೆಂಜ್ ತೆಗೆದುಕೊಳ್ಳುವಂತೆ ಯುವರಾಜ್ ಸಿಂಗ್, ಬ್ರಿಯಾನ್ ಲಾರಾ, ಕ್ರಿಸ್ ಗೇಯ್ಲ್ ಮತ್ತು ಸಚಿನ್ ತೆಂಡೂಲ್ಕರ್ ಸವಾಲು ಹಾಕಿದ್ದಾರೆ.

Comments are closed.