ಕ್ರೀಡೆ

ಒಂದೇ ಪಂದ್ಯದಿಂದ ಖುಲಾಯಿಸಿದ ಅಜ್ಜಿ ಅದೃಷ್ಟ: ಪೆಪ್ಸಿ ಕೋ ಕಂಪನಿಯಿಂದ ಅಜ್ಜಿಗೆ ಹೊಸ ಅವಕಾಶ

Pinterest LinkedIn Tumblr


ಲಂಡನ್: ಹಾಲಿ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಕ್ಯಾಮೆರಾಗಳ ಗಮನ ಸೆಳೆದು ಒಂದೇ ದಿನದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿಯ ಉತ್ತುಂಗಕ್ಕೇರಿದ್ದ 87ರ ವೃದ್ಧೆ ಚಾರುಲತಾ ಪಟೇಲ್ ಅವರು ಇದೀಗ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ.

ಈ ಹಿಂದೆ ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದ ವೇಳೆ ವೀಲ್ ಚೇರ್ ನಲ್ಲಿ ಕುಳಿತೇ ಭಾರತ ತಂಡವನ್ನು ಪ್ರೋತ್ಸಾಹಿಸಿದ್ದರು. ಇದೇ ಕಾರಣಕ್ಕಾಗಿ ಕ್ಯಾಮೆರಾಗಳೂ ಕೂಡ ಚಾರುಲತಾ ಅವರನ್ನು ಕೇಂದ್ರವಾಗಿರಿಸಿಕೊಂಡು ಪದೇ ಪದೇ ಅವರನ್ನು ಸ್ಕ್ರೀನ್ ಮೇಲೆ ತೋರಿಸುತ್ತಿದ್ದವು. ಪಂದ್ಯದ ಬಳಿಕ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪ ನಾಯಕ ರೋಹಿತ್ ಶರ್ಮಾ ಚಾರುಲತಾ ಪಟೇಲ್ ಅವರನ್ನು ಖುದ್ಧಾಗಿ ಭೇಟಿ ಮಾಡಿ ಅವರ ಆಶೀರ್ವಾದ ಪಡೆದಿದ್ದರು.

ಆ ಮೂಲಕ 87ರ ಹರೆಯದ ಅಭಿಮಾನಿ ಚಾರುಲತಾ ಪಟೇಲ್ ಮಿಂಚಿದ್ದಾರೆ. ಒಂದೇ ಪಂದ್ಯದಲ್ಲಿ ಚಾರುಲತಾ ವಿಶ್ವ ಕ್ರಿಕೆಟ್ ಅಭಿಮಾನಿಗಳ ಗಮನಸೆಳೆದಿದ್ದಾರೆ. ಇದೀಗ ಸೊಶಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿ ಮಿಂಚಿದ ಚಾರುಲತಾ ಈಗ ಜಾಹೀರಾತಿಗೆ ಎಂಟ್ರಿಕೊಟ್ಟಿದ್ದಾರೆ. ತಂಪು ಪಾನಿಯಾದ ಜಾಹೀರಾತಿನಲ್ಲಿ ಚಾರುಲತಾ ಕಾಣಿಸಿಕೊಂಡಿದ್ದು, ಪೆಪ್ಸಿ ಜಾಹೀರಾತಿನಲ್ಲಿ ಚಾರುಲತಾ ಪಟೇಲ್ ಮಿಂಚಿದ್ದಾರೆ.

ಪೆಪ್ಸಿಕೋ ತಂಪು ಪಾನಿಯ ಕಂಪನಿಯ ಡಿಜಿಟಲ್ ಜಾಹೀರಾತಿನಲ್ಲಿ ಚಾರುಲತಾ ಮಿಂಚುತ್ತಿದ್ದಾರೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯದ ನಡುವೆ ಚಾರುಲತಾ ಪಟೇಲ್ ಜಾಹೀರಾತಿನಲ್ಲಿ ಮೋಡಿ ಮಾಡುತ್ತಿದ್ದಾರೆ. ಮೊದಲ ಸೆಮಿಫೈನಲ್ ಪಂದ್ಯಕ್ಕೆ ಹಾಜರಾಗಿರುವ ಚಾರುಲತಾ ಮೈದಾನದಲ್ಲಿ ಮಾತ್ರವಲ್ಲ, ಜಾಹೀರಾತಿನಲ್ಲೂ ಕಾಣಿಸಿಕೊಂಡಿದ್ದಾರೆ.

Comments are closed.