ನವದೆಹಲಿ: ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದು ಆಫ್ಘಾನ್ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆಯನ್ನು ಮಾಡಿದ್ದು ಅವರನ್ನು ಪತ್ನಿ ಹಸೀನ್ ಜಹಾನ್ ಲಫಂಗ ಎಂದು ಜರಿದಿರುವ ಪೋಸ್ಟ್ ವೈರಲ್ ಆಗಿದೆ.
ವೈಯಕ್ತಿಕ ಬದುಕಿನ ಜಂಜಾಟದಿಂದಾಗಿ ಭಾರೀ ಸುದ್ದಿಯಾಗಿದ್ದ ಮೊಹಮ್ಮದ್ ಶಮಿಗೆ ಪತ್ನಿಯೇ ಸಾಮಾಜಿಕ ಜಾಲತಾಣಗಳಲ್ಲಿ ಚಾರಿತ್ರ್ಯಹರಣ ಮಾಡಿದ್ದಾರೆ. ಹ್ಯಾಟ್ರಿಕ್ ವಿಕೆಟ್ ಪಡೆದಿದ್ದ ಶಮಿಯನ್ನು ಜಹಾನ್ ಪರೋಕ್ಷವಾಗಿ ಹೊಗಳಿದ್ದರು. ಆದರೆ ವಿಂಡೀಸ್ ವಿರುದ್ಧದ ಪಂದ್ಯದ ನಂತರ ಶಮಿಯ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ.
ಶಮಿಯನ್ನು ಲಫಂಗ ಎಂದು ಜರಿದ ಜಹಾನ್ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದು ಈ ಫೋಸ್ಟ್ ಭಾರೀ ವೈರಲ್ ಆಗಿದೆ. ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾಗೆ ಆಪತ್ಭಾಂದವನಾಗಿರುವ ಶಮಿಯ ಇನ್ನೊಂದು ಮುಖವನ್ನು ಸಮಾಜಕ್ಕೆ ತಿಳಿಸುವ ಪ್ರಯತ್ನಕ್ಕೆ ಹಸೀನ್ ಕೈ ಹಾಕಿದ್ದಾರೆ.
ಮೊಹಮ್ಮದ್ ಶಮಿ ಟಿಕ್ ಟಾಕ್ ಅಕೌಂಟ್ ತೆರೆದಿದ್ದಾನೆ. ಆತ ಒಟ್ಟಾರೆ 97 ಮಂದಿಯನ್ನು ಫಾಲೋ ಮಾಡುತ್ತಿದ್ದು ಅದರಲ್ಲಿ 90 ಮಂದಿ ಹುಡುಗಿಯರದ್ದೆ. ಒಂದು ಮಗುವಿನ ತಂದೆಯಾಗಿ ಇದು ನಾಚಿಕೆಗೇಡು ಎಂದು ಪೋಸ್ಟ್ ಮಾಡಿದ್ದಾರೆ.
Comments are closed.