ಕ್ರೀಡೆ

ಜುಲೈ 14 ವಿಶ್ವಕಪ್ ನನ್ ಕೈಯಲ್ಲಿರಬೇಕ್: ಹಾರ್ದಿಕ್ ಪಾಂಡ್ಯ

Pinterest LinkedIn Tumblr


ಲಂಡನ್: ಟೀಂ ಇಂಡಿಯಾದ ಆಲ್ರೌಂಡರ್ ಯುವ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಜುಲೈ 14ರಂದು ವಿಶ್ವಕಪ್ ಟ್ರೋಫಿ ನನ್ನ ಕೈಯಲ್ಲಿರಬೇಕೆಂಬುದು ನನ್ನ ಆಸೆ ಎಂದು ಹೇಳಿದ್ದಾರೆ.

ವಿಶ್ವಕಪ್ ನಲ್ಲಿ ಟೀಂ ಇಂಡಿಯಾದ ಪರವಾಗಿ ಆಡಬೇಕೆಂಬುದು ನನ್ನು ಕನಸಾಗಿತ್ತು. ಅದರಲ್ಲೂ ಆಡುವ 11ರ ಬಳಗದಲ್ಲಿ ನಾನಿರಬೇಕು ಎಂದು ಬಯಸಿದ್ದೆ. ಈ ಕನಸೆಲ್ಲಾ ನನಸಾಗಿದೆ. ತುಂಬಾನೆ ಸಂತೋಷವಾಗಿದ್ದು ಜುಲೈ 14ರಂದು ವಿಶ್ವಕಪ್ ಟ್ರೋಫಿ ನನ್ನ ಕೈಯಲ್ಲಿರಬೇಕು ಎಂಬ ದೊಡ್ಡ ಆಸೆ ಇದೆ ಎಂದು ಐಸಿಸಿ ಜೊತೆ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

2011ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದಾಗ ರಸ್ತೆಯಲ್ಲಿ ನಾನು ಸಂಭ್ರಮಿಸಿದ್ದ ಫೋಟೋವನ್ನು ಕೆಲವು ದಿನಗಳ ಹಿಂದೆ ನನ್ನ ಗೆಳೆಯರು ಕಳುಹಿಸಿದ್ದರು. ಆದರೆ ಇಂದು ನಾನು ಕೂಡ ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದೇನೆ. ಅಂದು ಭಾರತಕ್ಕೆ ಕಪ್ ಗೆಲ್ಲಿಸಿ ಕೊಟ್ಟ ಧೋನಿ ಅವರೊಂದಿಗೆ ಇಂದು ನಾನಿದ್ದೇನೆ. ಇದಕ್ಕಿಂತ ಬೇರೇನು ಬೇಡ ನನಗೆ ಎಂದು ಹೇಳಿದ್ದಾರೆ.

ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಶ್ರಮ ವಹಿಸಿದ್ದೆ. ಅದರಂತೆ ನಾನು ತಂಡ ಸೇರಿಕೊಂಡಿದ್ದೇನೆ. ಚಾಲೆಂಜ್ ಎಂದರೆ ನನಗೆ ತುಂಬಾ ಇಷ್ಟ. ಈ ಬಾರಿ ವಿಶ್ವಕಪ್ ನಾವು ಗೆಲ್ಲುತ್ತೇವೆ. ಜುಲೈ 14ರಂದು ವಿಶ್ವಕಪ್ ಟ್ರೋಫಿ ನನ್ನ ಕೈಯಲ್ಲಿರಬೇಕು ಇದೆ ನನ್ನ ಗುರಿ ಎಂದು ಹೇಳಿದ್ದಾರೆ.

Comments are closed.