ಕ್ರೀಡೆ

ವೃತ್ತಿ ಬದುಕಿಗೆ ವಿದಾಯ ಹೇಳಿದ ಕ್ರಿಕೆಟಿಗ ಯುವರಾಜ್​ ಸಿಂಗ್​​

Pinterest LinkedIn Tumblr


ನವದೆಹಲಿ: ಭಾರತ ಕ್ರಿಕೆಟ್​​ ಇತಿಹಾಸದ ಪುಟದಲ್ಲಿ ಸಾರ್ವಕಾಲಿಕ ಅತೀ ಹೆಚ್ಚು ನೆನಪಿನಲ್ಲಿ ಇಡುವಂತ ಆಟಗಾರರಲ್ಲಿ ಯುವರಾಜ್​ ಸಿಂಗ್​ ಕೂಡ ಒಬ್ಬರು. ಅವರು, ಇಂದು( ಸೋಮವಾರ) ಎಲ್ಲ ಮಾದರಿಯ ಕ್ರಿಕೆಟ್​​ಗೆ​ ಸ್ವಂ-ಪ್ರೇರಿತರಾಗಿ ಮಾಧ್ಯಮದ ಮುಂದೆ ನಿವೃತ್ತಿ ಘೋಷಣೆ ಮಾಡಿಕೊಂಡಿದ್ದಾರೆ.​

ಮುಂಬೈನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಯುವರಾಜ್ ಸಿಂಗ್​ ಅವರು ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಅಲ್ಲದೇ ಅವರು ತಮ್ಮ ವೃತ್ತಿ ಜೀವನದ ನಿರ್ಣಾಯಕ ಕ್ಷಣಗಳಲ್ಲಿ ಬೆಳಕು ಚೆಲ್ಲಿದರು ಸ್ಮರಣೆ ಮಾಡಿಕೊಂಡರು.

ಐಸಿಸಿ ಏಕದಿನ ವಿಶ್ವಕಪ್​​ ಕ್ರಿಕೆಟ್ 2011ರ ಭಾರತ ತಂಡದ ವಿಜಯದಲ್ಲಿ ಇವರ ಆಲ್ರೌಂಡರ್ ಆಗಿ ನಿರ್ವಹಿಸಿದ ಪಾತ್ರ ಅತ್ಯಂತ ಪ್ರಮುಖ ಪಾತ್ರವಹಿಸಿತ್ತು. ಈ ಸಾಲಿನಲ್ಲಿ ಯುವರಾಜ್​ ಸಿಂಗ್​ ಅವರಿಗೆ ಮ್ಯಾನ್​ ಆಫ್​ ದಿ ಟೂರ್ನಾಮೆಂಟ್​ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.

ವಿಶ್ವ ಟಿ-20 2007ರ ಭಾರತದ ತಂಡದ ವಿಜಯದಲ್ಲೂ ಯುವರಾಜ್​ ಸಿಂಗ್​ ಪ್ರಮುಖ ಪಾತ್ರವಹಿಸಿದ್ದರು.ಈ ಟೂರ್ನಿಯಲ್ಲಿ ಅವರು ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾರ್ಡ್​​​ ಎಸೆದ ಒಂದು ಓವರ್​ನ ಎಲ್ಲ ಬಾಲ್​ಗಳಿಗೆ ಸಿಕ್ಸರ್​ ಸಿಡಿಸುವ ಮೂಲಕ ಕ್ರಿಕೆಟ್​ ಪ್ರೇಮಿಗಳ ಹೃದಯದಲ್ಲಿ ಶ್ವಾಶತ ಸ್ಥಾನ ಪಡೆದರು.

Comments are closed.