ಕ್ರೀಡೆ

ವಿಶ್ವಕಪ್‌ನಲ್ಲಿ ಇಂಡಿಯಾದ 27 ಶತಕಗಳ ದಾಖಲೆ

Pinterest LinkedIn Tumblr


ಲಂಡನ್: ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಹಿರಿಮೆಗೆ ಭಾರತೀಯ ತಂಡವು ಪಾತ್ರವಾಗಿದೆ.

ಇಂಗ್ಲೆಂಡ್‌ನಲ್ಲಿ 12ನೇ ಆವೃತ್ತಿಯ ವಿಶ್ವಕಪ್ ನಡೆಯುತ್ತಿರುವಂತೆಯೇ ಭಾರತ ಈಗಾಗಲೇ ಅತಿ ಹೆಚ್ಚು 27 ಶತಕಗಳನ್ನು ಸಿಡಿಸಿದೆ. ಈ ಮೂಲಕ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಪಟ್ಟಿಯಲ್ಲಿ ಐದು ಬಾರಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಹಿಂದಿಕ್ಕಿದೆ.

ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ತಂಡಗಳು:
27 ಭಾರತ
26 ಆಸ್ಟ್ರೇಲಿಯಾ
23 ಶ್ರೀಲಂಕಾ
17 ವೆಸ್ಟ್‌ಇಂಡೀಸ್
15 ನ್ಯೂಜಲೆಂಡ್
14 ದ.ಆಫ್ರಿಕಾ/ಪಾಕಿಸ್ತಾನ/ಇಂಗ್ಲೆಂಡ್

ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆಸೀಸ್ ವಿರುದ್ಧ ಶಿಖರ್ ಧವನ್ ಆಕರ್ಷಕ ಶತಕ ಸಾಧನೆ ಮಾಡಿದ್ದರು. ಇದು ಏಕದಿನ ವಿಶ್ವಕಪ್‌ನಲ್ಲಿ ಧವನ್ ಬ್ಯಾಟ್‌ನಿಂದ ಸಿಡಿದ ಮೂರನೇ ಶತಕ ಸಾಧನೆಯಾಗಿದೆ.

ಅಂದ ಹಾಗೆ ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕಗಳ ದಾಖಲೆಯನ್ನು ಭಾರತದ ಮಾಜಿ ಐಕಾನ್ ಸಚಿನ್ ತೆಂಡೂಲ್ಕರ್ ಹೊಂದಿದ್ದಾರೆ. ದಾಖಲೆಯ ಆರು ವಿಶ್ವಕಪ್‌ನಲ್ಲಿ ಭಾಗವಹಿಸಿರುವ ಸಚಿನ್ ಆರು ಶತಕಗಳನ್ನು ಬಾರಿಸಿದ್ದರು. ಹಾಗೆಯೇ ಸೌರವ್ ಗಂಗೂಲಿ ನಾಲ್ಕು ಶತಕಗಳನ್ನು ಹೊಂದಿದ್ದಾರೆ.

Comments are closed.