ಕ್ರೀಡೆ

ಆಸ್ಟ್ರೇಲಿಯಾ​ಗೆ ಮಣ್ಣು ಮುಕ್ಕಿಸಿದ ಭಾರತ; 36 ರನ್​ಗಳ ಭರ್ಜರಿ ಜಯ

Pinterest LinkedIn Tumblr

ಲಂಡನ್​: ಶಿಖರ್​​​ ಧವನ್​​​​ (117) ಅವರ ಶತಕ, ನಾಯಕ ವಿರಾಟ್​​ ಕೊಹ್ಲಿ (82) ಮತ್ತು ರೋಹಿತ್​​ ಶರ್ಮಾ (57) ಅವರ ಸ್ಫೋಟಕ ಅರ್ಧ ಶತಕ ಮತ್ತು ಹಾರ್ದಿಕ್​​ ಪಾಂಡ್ಯ (48) ಅವರ ಕ್ಷಿಪ್ರ ಬ್ಯಾಟಿಂಗ್​ ಹಾಗೂ ಭುವನೇಶ್ವರ್​​, ಬುಮ್ರಾ ಮತ್ತು ಚಹಾಲ್​​ ಅವರ ಶಿಸ್ತುಬದ್ಧ ಬೌಲಿಂಗ್​​ ನೆರವಿನಿಂದ ಭಾರತ ತಂಡ ವಿಶ್ವಕಪ್​​​ನ 14ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು 36 ರನ್​​ಗಳ ಜಯ ದಾಖಲಿಸಿತು. ಈ ಮೂಲಕ ವಿರಾಟ್​ ಕೊಹ್ಲಿ ಬಳಗ ವಿಶ್ವಕಪ್​ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು.

ಕೆನ್ನಿಂಗ್ಟನ್​​​​​​ ಓವಲ್​​ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್​​ ಮಾಡಿದ ಭಾರತ 50 ಓವರ್​ಗಳಲ್ಲಿ 5 ವಿಕೆಟ್​​ ನಷ್ಟಕ್ಕೆ 352 ರನ್​ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಹಾಲಿ ಚಾಂಪಿಯನ್ಸ್​​ ಆಸ್ಟ್ರೇಲಿಯಾ 50 ಓವರ್​ಗಳಲ್ಲಿ ಆಲೌಟ್​​​ ಆಗಿ 316 ರನ್​ ಗಳಿಸಲಷ್ಟೇ ಶಕ್ತವಾಯಿತು.

ನಂತರ ಬ್ಯಾಟಿಂಗ್​​ ಆರಂಭಿಸಿದ ಆಸ್ಟ್ರೇಲಿಯಾದ ಆರಂಭಿಕರಾದ ಡೇವಿಡ್ ವಾರ್ನರ್​​ (56) ಅರ್ಧ ಶತಕ ಸಿಡಿಸಿದರೆ, ನಾಯಕ ಆ್ಯರೋನ್​​ ಫಿಂಚ್​​ (36) ಶೀಘ್ರ ವಿಕೆಟ್​ ಕಳೆದುಕೊಂಡರು. ನಂತರ ಬಂದ ಸ್ಟೀವ್​ ಸ್ಮಿತ್​​​ ಉತ್ತಮ ಆಟದೊಂದಿಗೆ 69 ರನ್​ ಕಲೆಹಾಕಿ ಭುವನೇಶ್ವರ್​ ಎಸೆತದಲ್ಲಿ ಎಲ್​ಬಿಡಬ್ಲ್ಯೂಗೆ ಬಲಿಯಾದರು. ಮ್ಯಾಕ್ಸ್​​ವೇಲ್​​ (28), ಸ್ಟೋನಿಸ್​​ (0), ಆಲೆಕ್ಸ್​​ ಕ್ಯಾರಿ ( 55) ಕೌಂಟ್ಲರ್​​ ನೈಲ್​ (4) ಮತ್ತು ಪ್ಯಾಟ್​​ ಕಮ್ಮಿನ್ಸ್​​​​ (08) ಹಾಗೂ ಬಳಿಕ ಬಂದವರು ತೀರಾ ಕಳಪೆ ಆಟದೊಂದಿಗೆ ವಿಕೆಟ್​ ಕಳೆದುಕೊಂಡರು.

ಭಾರತದ ಪರ ಬೌಲಿಂಗ್​ ಮಾಡಿದ ಬುಮ್ರಾ ಮತ್ತು ಭುವೇಶ್ವರ್ 3 ​​​​,​ ಚಾಹಲ್​​ 2 ವಿಕೆಟ್​​ ಪಡೆದು ಪಾರಮ್ಯ ಮೆರೆದರು.

ಇದಕ್ಕೂ ಮುನ್ನ ರೋಹಿತ್​ ಶರ್ಮ (57) ಅರ್ಧ ಶತಕ ಬಾರಿಸಿ ಆಲೆಕ್ಸ್​​ ಕ್ಯಾರಿಗೆ ವಿಕೆಟ್​ ಒಪ್ಪಿಸಿದರು. ಆರಂಭಿಕ ಧವನ್​​​​​ 109 ಎಸೆತಗಳಲ್ಲಿ 16 ಬೌಂಡರಿಗಳೊಂದಿಗೆ 117 ರನ್​​ ಗಳಿಸಿದರು. ಈ ವೇಳೆ ಸ್ಟಾರ್ಕ್​ ಎಸೆತದಲ್ಲಿ ಲ್ಯಾನ್​ ಕ್ಯಾಚಿತ್ತರು. ನಾಯಕ ವಿರಾಟ್​​ ಕೊಹ್ಲಿ 77 ಎಸೆತಗಳಲ್ಲಿ 2 ಸಿಕ್ಸರ್​​​ ಹಾಗೂ 4 ಬೌಂಡರಿಗಳೊಂದಿಗೆ 82 ರನ್​​​ ದಾಖಲಿಸಿ ಸ್ಟೋನಿಸ್​​ಗೆ ಬಲಿಯಾದರು. ಸ್ಪೋಟಕ ಬ್ಯಾಟ್ಸ್​ಮನ್​ ಹಾರ್ದಿಕ್​​ ಪಾಂಡ್ಯ ತನ್ನ ವೇಗದ ಬ್ಯಾಟಿಂಗ್​ನಿಂದ 3 ಸಿಕ್ಸರ್​​ ಹಾಗೂ 4 ಬೌಂಡರಿಗಳೊಂದಿಗೆ 48 ರನ್​​ ಗಳಿಸಿ ಫಿಂಚ್​​ಗೆ ಕ್ಯಾಚ್​​ ನೀಡಿ ಪೆವಿಲಿಯನ್​​​ ಸೇರಿದರು.

ನಂತರ ಬಂದ ವಿಕೆಟ್​​ ಕೀಪರ್​ ಮಹೇಂದ್ರ ಸಿಂಗ್​ ಧೋನಿ (27), ಕನ್ನಡಿಗ ಕೆ.ಎಲ್​​ ರಾಹುಲ್​​​​​​​​​ (11*) ಭಾರತದ ಸ್ಕೋರ್​ ಅನ್ನು 350ರ ಗಡಿ ದಾಟಿಸಿದರು. ಈ ಮೂಲಕ ಆಸೀಸ್​​ ಪಡೆಗೆ 352 ರನ್​ಗಳ ಗುರಿ ನಿಗದಿಪಡಿಸಿತ್ತು.

ಆಸ್ಟ್ರೇಲಿಯಾ ಪರ ಮಾರ್ಕಸ್​​ ಸ್ಟೋನಿಸ್​​​ 2, ಪ್ಯಾಟ್​​ ಕಮ್ಮಿನ್ಸ್​​, ಮಿಚೆಲ್​​ ಸ್ಟಾರ್ಕ್​, ನಾಥನ್​​​​​​ ಕೌಲ್ಟರ್​ ನೈಲ್​​ ತಲಾ ಒಂದು ವಿಕೆಟ್​​ ಪಡೆದರು.

Comments are closed.