ಕ್ರೀಡೆ

ಅನುಚಿತ ವರ್ತನೆ ತೋರಿದ್ದಕ್ಕೆ ಕ್ರಿಕೆಟಿಗನನ್ನು ವಿಮಾನದಿಂದ ಹೊರದಬ್ಬಿದ ಸಿಬ್ಬಂದಿ !

Pinterest LinkedIn Tumblr

ಸಿಡ್ನಿ: ಮಹಿಳೆಯರ ಜೊತೆ ವಾಗ್ವಾದ. ವಿಮಾನದಲ್ಲಿ ಅನುಚಿತ ವರ್ತನೆ ತೋರಿದ್ದರಿಂದ ವಿಮಾನದ ಸಿಬ್ಬಂದಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕೆಲ್ ಸ್ಲೇಟರ್ ರನ್ನು ಹೊರದಬ್ಬಿದ್ದಾರೆ.

ವಾಗಾವಾಗಾಕ್ಕೆ ತೆರಳುತ್ತಿದ್ದ ಮೈಕೆಲ್ ಸ್ಲೇಟರ್ ವಿಮಾನ ಹೊರಡುವ ವೇಳೆ ಅಪರಿಚಿತ ಮಹಿಳೆಯರ ಜತೆ ವಾಗ್ವಾದ ನಡೆಸಿದ್ದಾರೆ. ಬಳಿಕ ಶೌಚಾಲಯದ ಒಳಕ್ಕೆ ಹೋಗಿ ಬಾಗಿಲು ಹಾಕಿ ಕುಳಿತಿದ್ದಾರೆ. ಈ ವೇಳೆ ಸಿಬ್ಬಂದಿ ಅವರನ್ನು ಹೊರಗೆ ಕರೆಸಿ ವಿಮಾನದಿಂದ ಹೊರಕ್ಕೆ ಹಾಕಿದ್ದಾರೆ.

ಈ ಗಲಾಟೆಯಿಂದಾಗಿ ವಿಮಾನ 30 ನಿಮಿಷ ತಡವಾಗಿ ಹಾರಟ ನಡೆಸಿತು. ಒಟ್ಟಿನಲ್ಲಿ ಧಿಮಾಕು ತೋರಿಸಲು ಹೋಗಿ ಆಸೀಸ್ ಮಾಜಿ ಆಟಗಾರನಿಗೆ ಗರ್ವಭಂಗವಾಗಿದೆ.

Comments are closed.