ಕ್ರೀಡೆ

ಕ್ರಿಕೆಟ್‍ನಲ್ಲಿ ರನ್ ಕದಿಯಲು ಈ ರೀತಿಯ ಐಡಿಯಾ ಮಾಡಿದ್ದು ಯಾರು ? ಈ ವೀಡಿಯೊ ನೋಡಿದರೆ ಬಿದ್ದು ಬಿದ್ದು ನಗ್ತೀರಿ….

Pinterest LinkedIn Tumblr

ಸದ್ಯ ಭಾರತದಲ್ಲಿ ಕ್ರಿಕೆಟ್ ಮೇನಿಯಾ ತುಂಬಾ ಜೋರಾಗಿಯೇ ಇದೆ. ಭಾರತದಲ್ಲಿ ಕ್ರಿಕೆಟ್ ಗೆ ಇರುವಷ್ಟು ಮತಹ್ವ ಮತ್ಯಾವ ಕ್ರೀಡೆಗೂ ಇಲ್ಲ. ಇನ್ನು ಕೆಲ ದಿನಗಳಲ್ಲೇ ವಿಶ್ವಕಪ್ ಮಹಾಸಮರ ಶುರುವಾಗಲಿದ್ದು ಈ ಮಧ್ಯೆ ಕೆಲ ಗಲ್ಲಿ ಹುಡುಗರು ಕ್ರಿಕೆಟ್ ಆಡುವ ವೇಳೆ ರನ್ ಕದಿಯಲು ಬೈಕ್ ಬಳಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತೀಚೆಗೆ ಕೆಲ ಹುಡುಗರು ಗಲ್ಲಿ ಕ್ರಿಕೆಟ್ ಆಡುವಾಗ ವಿಭಿನ್ನ ಐಡಿಯಾಗಳನ್ನು ಮಾಡುತ್ತಿದ್ದಾರೆ. ಈ ವಿಡಿಯೋಗಳು ಇದೀಗ ವೈರಲ್ ಆಗುತ್ತಿವೆ. ಇನ್ನು ಕೆಲ ಹುಡುಗರು ಗಲ್ಲಿ ಕ್ರಿಕೆಟ್ ವೇಳೆ ರನ್ ಕದಿಯಲು ಬೈಕ್ ಅನ್ನು ಬಳಸಿರುವುದು ನಗು ಬರಿಸುತ್ತದೆ.

ಈ ಗಲ್ಲಿ ಹುಡುಗರು ಕುರಿತು ಯಾವುದೇ ಮಾಹಿತಿ ಇಲ್ಲದಿದ್ದರೂ ಅವರ ಕ್ರಿಯೆಟಿವ್ ಐಡಿಯಾ ಸಖತ್ ವರ್ಕೌಟ್ ಆಗಿದೆ. ಚೆಂಡನ್ನು ಬಾರಿಸಿದ ನಂತರ ಇಬ್ಬರು ಬ್ಯಾಟ್ಸ್ ಮನ್ ಗಳು ರನ್ ಕದಿಯಲು ಬೈಕ್ ಗಳನ್ನು ಬಳಸಿದ್ದಾರೆ.

Comments are closed.