ಕ್ರೀಡೆ

ಐಪಿಎಲ್ ಫೈನಲಿನಲ್ಲಿ ವಿವಾದಾತ್ಮಕ ರನೌಟ್ ಬಲೆಗೆ ಸಿಲುಕಿದ ಧೋನಿ

Pinterest LinkedIn Tumblr

ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಇತಿಹಾಸದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅತ್ಯಂತ ವಿವಾದಾತ್ಮಕ ರನೌಟ್ ಬಲೆಗೆ ಸಿಲುಕಿದ್ದಾರೆ.

ಅದು ಕೂಡಾ ಹೈದಾರಾಬಾದ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ 12ರ ಫೈನಲ್ ಪಂದ್ಯದಲ್ಲಿ ಎಂಬುದು ಅಷ್ಟೇ ಮುಖ್ಯವೆನಿಸುತ್ತದೆ.

ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ 149 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು. ಬಳಿಕ ಗುರಿ ಬೆನ್ನಟ್ಟಿದ ಚೆನ್ನೈ 10.3 ಓವರ್‌‌ಗಳಲ್ಲೇ 73 ರನ್‌ಗಳಿಗೆ ಮೂರು ವಿಕೆಟುಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು.

ಈ ಹಂತದಲ್ಲ ಕ್ರೀಸಿಗಿಳಿದ ಮಹೇಂದ್ರ ಸಿಂಗ್ ಧೋನಿ ಪಂದ್ಯವನ್ನು ಫಿನಿಶ್ ಮಾಡಲಿದ್ದಾರೆಂದು ಅತಿ ಹೆಚ್ಚು ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿತ್ತು.

ಆದರೆ ಮೊದಲ ರನ್ನಿಗಾಗಿ ಏಳು ಎಸೆತಗಳನ್ನು ಎದುರಿಸಿದ ಧೋನಿ ಬಳಿಕ ವಿವಾದಾತ್ಮಕ ರೀತಿಯಲ್ಲಿ ರನೌಟ್‌ಗೆ ಬಲಿಯಾದರು.

ಹಾರ್ದಿಕ್ ಪಾಂಡ್ಯ ಎಸೆತದ ಇನ್ನಿಂಗ್ಸ್‌ನ 13ನೇ ಓವರ್‌ನ ನಾಲ್ನನೇ ಎಸೆತದಲ್ಲಿ ಶೇನ್ ವಾಟ್ಸನ್ ಹೊಡೆತ ಚೆಂಡಿನಲ್ಲಿ ಎರಡನೇ ರನ್ ಓಡುವ ಭರದಲ್ಲಿ ಇಶಾನ್ ಕಿಶಾನ್ ನೇರ ಥ್ರೋದಿಂದ ರನೌಟ್ ಮಾಡಿದರು.

ಮೊದಲು ಮಿಸ್ ಫೀಲ್ಡ್ ಆಗಿರುವುದರಿಂದ ಧೋನಿ ಎರಡನೇ ರನ್‌ಗಾಗಿ ಓಡಿದ್ದರು. ಕ್ರೀಸ್‌ನಲ್ಲಿ ಅತಿ ವೇಗದಲ್ಲಿ ಓಡುವ ಕ್ರಿಕೆಟಿಗರಲ್ಲಿ ಓರ್ವರಾಗಿರುವ ಹೊರತಾಗಿಯೂ ನಿರ್ಣಾಯಕ ಪಂದ್ಯದಲ್ಲಿ ಧೋನಿ ಎಡವಟ್ಟು ಮಾಡಿದರು. ಬಳಿಕ ರಿಪ್ಲೇನಲ್ಲಿ ಪರಿಶೀಲಿಸಿದಾಗ ಔಟ್ ಅಥವಾ ನಾಟೌಟ್ ಎಂಬುದು ಸ್ಪಷ್ಟವಾಗುತ್ತಿರಲಿಲ್ಲ.

ಆದರೆ ಐಸಿಸಿ ನಿಯಮಗಳ ಪ್ರಕಾರ ಕ್ರೀಸ್ ಮೇಲೆ ಬ್ಯಾಟ್ ಇದ್ದರೂ ಔಟ್ ನೀಡಲಾಗುತ್ತದೆ. ಹಾಗಾಗಿ ಧೋನಿ ಬಚಾವ್ ಆಗಲು ಯಾವುದೇ ಪುರಾವೆಗಳು ಇಲ್ಲದಿದ್ದುರಿಂದ ಅಂತಿಮವಾಗಿ ವಿಕೆಟ್ ಒಪ್ಪಿಸಬೇಕಾಯಿತು. ಎಂಟು ಎಸೆತಗಳನ್ನು ಮಾತ್ರ ಎದುರಿಸಿದ ಧೋನಿ ಎರಡು ರನ್ ಮಾತ್ರ ಗಳಿಸಿ ನಿರಾಸೆ ಮೂಡಿಸಿದರು.

Comments are closed.