ಕ್ರೀಡೆ

ಒಂದೇ ದಿನದಲ್ಲಿ ಆರ್​ಸಿಬಿಯ ಈ ಚೆಲುವೆ ಫುಲ್ ಫೇಮಸ್ !

Pinterest LinkedIn Tumblr

ಐಪಿಎಲ್​​ನಲ್ಲಿ ನಿನ್ನೆ ನಡೆದ ಸನ್​​ರೈಸರ್ಸ್​ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ 4 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಗೆಲುವಿನೊಂದಿಗೆ 12ನೇ ಆವೃತ್ತಿಯ ಐಪಿಎಲ್​ಗೆ ವಿರಾಟ್ ಟೀಂ ವಿದಾಯ ಹೇಳಿತು.

ಚಿನ್ನಸ್ವಾಮಿಯಲ್ಲಿ ನಡೆದ ಈ ಪಂದ್ಯ ಸಾಕಷ್ಟು ರೋಚಕತೆಯಿಂದ ಕೋಡಿತ್ತು. ಆದರೆ, ಆರ್​ಸಿಬಿ ನಿನ್ನೆಯ ಪಂದ್ಯದಲ್ಲಿ ಗೆದ್ದ ಸುದ್ದಿಯ ಜೊತೆಗೆ ಆರ್​​ಸಿಬಿ ಅಭಿಮಾನಿಯೊಬ್ಬರ ಸುದ್ದಿಯು ಭಾರೀ ವೈರಲ್ ಆಗುತ್ತಿದೆ. ರಾತ್ರಿ ಕಳೆದ ಬೆಳಕು ಹರಿಯುವ ಮುನ್ನವೇ ಆರ್​ಸಿಬಿಯ ಈ ಅಭಿಮಾನಿ ಯುವಕರ ಹೃದಯಕ್ಕೆ ಕಾಲಿಟ್ಟಿದ್ದು, ಸಾಮಾಜಿಕ ತಾಣಗಳಲ್ಲಿ ಓಡಾಡುತ್ತಿದ್ದಾಳೆ.

https://www.instagram.com/p/BxDY_lnna1L/?utm_source=ig_embed

ಆರ್​ಸಿಬಿ-ಹೈದರಾಬಾದ್ ಪಂದ್ಯ ಆಗುವ ವೇಳೆ ಕ್ಯಾಮೆರಮನ್​​​ ಕಣ್ಣಿಗೆ ಕಂಡ ಈ ಮುದ್ದಾದ ಹುಡುಗಿಯ ಹೆಸರು ದೀಪಿಕಾ. ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿಯಂತೆ. ಆರ್​ಸಿಬಿಗೆ ಪ್ರೋತ್ಸಾಹ ನೀಡಲು ಬಂದಿದ್ದ ಇವರು ರೆಡ್ ಕ್ರಾಪ್ ಹಾಗೂ ಟಾಪ್ ಧರಿಸಿ ಮಿಂಚುತ್ತಿದ್ದರು. ಆರ್​ಸಿಬಿ ಬ್ಯಾಟ್ಸ್​ಮನ್​ಗಳು ಚೆಂಡನ್ನು ಬೌಂಡರಿ-ಸಿಕ್ಸರ್​​ಗೆ ಅಟ್ಟಿದಾಗಲೆಲ್ಲ ಕ್ಯಾಮೆರಮಾನ್​​ ಈ ಹುಡುಗಿಯ ಕಡೆ ಕ್ಯಾಮೆರ ತಿರುಗಿಸಿ, ತಿರುಗಿಸಿ, ಈ ಮಟ್ಟಿಗೆ ವೈರಲ್ ಆಗುವಂತೆ ಮಾಡಿದ್ದಾರೆ.

ಇನ್​​ಸ್ಟಾಗ್ರಾಂ, ಫೇಸ್​​ಬುಕ್​​, ವಾಟ್ಸ್​​ಆ್ಯಪ್​​​ನಲ್ಲಿ ಇವರ ಫೋಟೋ ಭಾರೀ ಹರಿದಾಡುತ್ತಿದ್ದು, ನ್ಯಾಷನಲ್ ಕ್ರಶ್ ಎಂದು ಕರೆಯುತ್ತಿದ್ದಾರೆ. ನಿನ್ನೆವರೆಗೆ ದೀಪಿಕಾ ಅವರ ಇನ್​ಸ್ಟಾಗ್ರಾಂನಲ್ಲಿ ಕೇವಲ 4 ಸಾವಿರದಷ್ಟು ಫಾಲೋವರ್ಸ್​​ಗಳಿದ್ದರು. ಆದರೆ ಇಂದು ಬೆಳಕು ಹರಿಯುವ ಹೊತ್ತಿಗೆ ಇವರನ್ನು ಲಕ್ಷಾಂತರ ಜನರು ಫಾಲೋ ಮಾಡುತ್ತಿದ್ದಾರೆ. ಅಲ್ಲದೆ ದೀಪಿಕಾ ಅಭಿಮಾನಿಗಳ ಬಳಗ ಕೂಡ ಹುಟ್ಟುಕೊಂಡಿದೆ.

Comments are closed.