ಕ್ರೀಡೆ

ಆರ್‌ಸಿಬಿಯ ಪ್ಲೇ ಆಫ್ ಕನಸು ನುಚ್ಚುನೂರು ಮಾಡಿದ್ದು ಈ ಮೂವರು ಆಟಗಾರರು !

Pinterest LinkedIn Tumblr

ಬೆಂಗಳೂರು: 12ನೇ ಸಲವೂ ಐಪಿಎಲ್ ಗೆಲ್ಲಲು ಆರ್ಸಿಬಿ ಕನಸು ನನಸಾಗೇ ಉಳಿದಿದೆ. ಈ ಬಾರಿಯೂ ಐಪಿಎಲ್ ನಿಂದ ಹೊರಬಂದಿರುವ ಆರ್‌ಸಿಬಿ ತಂಡ ಪ್ಲೇ ಆಫ್ ನಿಂದ ದೂರ ಉಳಿಯಲು ಈ ಮೂವರು ಕಾರಣಿಭೂತರು.

ಮೊದಲ ಆರು ಪಂದ್ಯಗಳಲ್ಲಿ ಸತತ ಸೋಲು ಕಂಡಿದ್ದ ಆರ್‌ಸಿಬಿ ಪ್ಲೇ ಆಫ್ ಗೇರುವುದು ಬಹುತೇಕ ಅನುಮಾನ ಎಂದು ಹೇಳಲಾಗಿತ್ತು. ಈ ಮಧ್ಯೆ ಕೆಲ ಪಂದ್ಯಗಳನ್ನು ಗೆದ್ದ ಆರ್‌ಸಿಬಿ ತಂಡ ಪ್ಲೇ ಆಫ್ ಕನಸನ್ನು ನನಸಾಗಿಸಿಕೊಂಡಿತ್ತು.

ಆದರೆ ಮುಂಬೈ ಇಂಡಿಯನ್ಸ್ ವಿರುದ್ಧದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಸಿತ್ ಮಾಲಿಂಗ್ ನೋಬಾಲ್ ಗಮನಿಸದ ಅಂಪೈರ್ ನಿಂದಾಗಿ ಪಂದ್ಯ ಸೋತಿತ್ತು. ಇದರಿಂದ ಆಕ್ರೋಶಗೊಂಡ ಕೊಹ್ಲಿ ಅಂಪೈರ್ ವಿರುದ್ಧ ಕೆಂಡಾಮಂಡಲರಾದರು.

ಇನ್ನು ಕೆಕೆಆರ್ ವಿರುದ್ಧದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆ್ಯಂಡ್ರೆ ರಸೆಲ್ ಆರ್‌ಸಿಬಿ ಗೆಲುವಿಗೆ ಮುಳುವಾಗಿದ್ದರು. ಹೌದು 206 ರನ್ ಗುರಿ ಬೆನ್ನತ್ತಿದ್ದ ಕೆಕೆಆರ್ ಗೆ ಕೊನೆ 3 ಓವರ್ ನಲ್ಲಿ 53 ರನ್ ಬೇಕಿತ್ತು. ಈ ವೇಳೆ ಸ್ಫೋಟಕದ ಬ್ಯಾಟಿಂಗ್ ಮಾಡಿದ ರಸೆಲೆ 13 ಎಸೆತಗಳಲ್ಲಿ 7 ಸಿಕ್ಸರ್ ಸಮೇತ 48 ರನ್ ಸಿಡಿಸಿ ಆರ್‌ಸಿಬಿಯಿಂದ ಗೆಲುವು ಕಸಿದುಕೊಂಡಿದ್ದರು.

ಇನ್ನು ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಸಾಧಿಸಿ ಪ್ಲೇ ಆಫ್ ಆಸೆ ಜೀವಂತವಾಗಿರಿಸಿಕೊಳ್ಳುವ ವಿಶ್ವಾಸದಲ್ಲಿತ್ತು. ಆದರೆ ಅದಕ್ಕೆ ವರುಣ ದೇವ ಆರ್‌ಸಿಬಿ ಆಸೆಗೆ ತಣ್ಣೀರೆರೆಚಿದ. ಈ ಮೂರು ಪಂದ್ಯ ಗೆದ್ದಿದ್ದರೆ ಆರ್ಸಿಬಿಗೆ ಪ್ಲೇ ಆಫ್ ಅವಕಾಶ ಸಿಗುವ ಸಾಧ್ಯತೆ ಇರುತ್ತಿತ್ತು.

ಒಟ್ಟಾರೆ 12ನೇ ಆವೃತ್ತಿಯ ಐಪಿಎಲ್ ನಲ್ಲಿ ಆರ್ಸಿಬಿ ತಂಡ 13 ಪಂದ್ಯಗಳನ್ನು ಆಡಿದ್ದು 4 ಪಂದ್ಯ ಗೆಲುವಿನೊಂದಿಗೆ 9 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

Comments are closed.