ಕ್ರೀಡೆ

ಅಬ್ಬರಿಸಿದ ಎಬಿಡಿ; ಆರ್​ಸಿಬಿ ಪ್ಲೇ ಆಫ್​ ಆಸೆ ಜೀವಂತ! ಪಂಜಾಬ್ ವಿರುದ್ಧ17 ರನ್ ಗಳ ಗೆಲುವು

Pinterest LinkedIn Tumblr

ಬೆಂಗಳೂರು: ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ತಂಡ 17 ರನ್ ಗಳಿಂದ ಗೆಲುವು ಸಾಧಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಅಬ್ಬರ ಬ್ಯಾಟಿಂಗ್ ಮಾಡಿ 202 ರನ್ ಬೃಹತ್ ಮೊತ್ತವನ್ನು ಪೇರಿಸಿತು. ಆರ್ಸಿಬಿ ಪರ ಪಾರ್ಥಿವ್ ಪಟೇಲ್ 43, ಎಬಿ ಡಿವಿಲಿಯರ್ಸ್ ಅಜೇಯ 82 ಮತ್ತ ಸ್ಟೋಯ್ನಿಸ್ ಅಜೇಯ 46 ರನ್ ಪೇರಿಸಿದ್ದಾರೆ. ಇದರೊಂದಿಗೆ ಪಂಜಾಬ್ ಗೆ 203 ರನ್ ಗಳ ಬೃಹತ್ ಟಾರ್ಗೆಟ್ ನೀಡಲಾಯಿತು.

ಈ ಗುರಿ ಬೆನ್ನಟ್ಟಿದ ಪಂಜಾಬ್ ಗೆ ಆರಂಭಿಕ ಆಟಗಾರರಾದ ಕ್ರಿಸ್ ಗೇಯ್ಲ್ ಮತ್ತು ಕೆಎಲ್ ರಾಹುಲ್ ಉತ್ತಮ ಆರಂಭ ತಂದುಕೊಟ್ಟರು. ಆದರೆ ಈ ಜೊತೆಯಾಟಕ್ಕೆ ಅಂತ್ಯವಾಡಿದ್ದು ಉಮೇಶ್ ಯಾದವ್. 23 ರನ್ ಪೇರಿಸಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಗೇಯ್ಲ್ ರನ್ನು ಔಟ್ ಮಾಡಿದರು.

ನಂತರ ಬಂದ ಅಗರವಾಲ್ ಸಹ ಸ್ಫೋಟಕ ಬ್ಯಾಟಿಂಗ್ ಮಾಡಿ ತಂಡದ ಮೊತ್ತವನ್ನು ಕಾಯ್ದುಕೊಂಡರು. 35 ರನ್ ಗಳಿಸಿದ್ದ ಅಗರವಾಲ್ ರನ್ನು ಔಟ್ ಮಾಡಿ ಪೆವಿಲಿಯನ್ ದಾರಿ ತೋರಿಸಲಾಯಿತು. ಈ ಮಧ್ಯೆ 42 ರನ್ ಗಳಿಸಿದ್ದ ಕೆಎಲ್ ರಾಹುಲ್ ಮೊಹಿನ್ ಅಲಿ ಬಲೆಗೆ ಬಿದ್ದರು.

ಈ ವೇಳೆ ಮೈದಾನಕ್ಕೆ ಬಂದ ಪೂರನ್ ಮತ್ತೊಮ್ಮೆ ಸ್ಫೋಟಕ ಬ್ಯಾಟಿಂಗ್ ಮಾಡಿ 46 ರನ್ ಪೇರಿಸಿ ಪಂಜಾಬ್ ಗೆ ಗೆಲುವಿನ ದಾರಿ ತೋರಿಸಿದರು. ಆದರೆ ಈ ವೇಳೆ ಸೈನಿ ಉತ್ತಮ ಬೌಲಿಂಗ್ ಮಾಡಿ ಅವರನ್ನು ಔಟ್ ಮಾಡಿದ್ದು ಅಲ್ಲಿಗೆ ಆರ್ಸಿಬಿ ಗೆಲುವು ಖಚಿತವಾಗಿತ್ತು. ಅಂತಿಮವಾಗಿ 20 ಮುಕ್ತಾಯಕ್ಕೆ 7 ವಿಕೆಟ್ ಕಳೆದುಕೊಂಡು ಪಂಜಾಬ್ 17 ರನ್ ಗಳಿಂದ ಆರ್ಸಿಬಿಗೆ ಶರಣಾಯಿತು.

Comments are closed.