ಕ್ರೀಡೆ

ವಿಶ್ವ ಬಾಕ್ಸಿಂಗ್ ಚಾಂಪಿಯನ್​ಗೆ ಆಘಾತ ಕೊಟ್ಟ ಭಾರತದ ಕವೀಂದರ್ ಸಿಂಗ್ ಬಿಷ್ತ್

Pinterest LinkedIn Tumblr


ಬ್ಯಾಂಕಾಕ್: ಮಲೇಷ್ಯಾದ ರಾಜಧಾನಿಯಲ್ಲಿ ನಡೆಯುತ್ತಿರುವ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್​ಶಿಪ್​ನಲ್ಲಿ ಭಾರತದ ಕವೀಂದರ್ ಸಿಂಗ್ ಬಿಷ್ತ್ ಹೀರೋ ಎನಿಸಿದ್ದಾರೆ. 56 ಕಿಲೋ ವಿಭಾಗದಲ್ಲಿ ಹಾಲಿ ವಿಶ್ವ ಚಾಂಪಿಯನ್ ಕೈರಟ್ ಯೆರಲಿಯೆವ್ ವಿರುದ್ಧ ಭಾರತದ ಕವೀಂದರ್ ಸಿಂಗ್ ಅವರು ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಕಜಕಸ್ತಾನದ ಕೈರಟ್ ವಿರುದ್ಧದ ಈ ಹಣಾಹಣಿಯಲ್ಲಿ ಕವೀಂದರ್ ಅಪ್ರತಿಮ ಹೋರಾಟ ತೋರಿದರು.

ಕೈರಟ್ ಯೆರಲಿಯೆವ್ ಅವರು ಸತತವಾಗಿ ಚುರುಕಿನ ದಾಳಿ ನಡೆಸಿದರೂ ಕವೀಂದರ್ ಅವರು ಜಾಣತನದಿಂದ ಕಾದು ಎದುರಾಳಿಗೆ ಪಂಚ್​ಗಳನ್ನು ನೀಡುತ್ತಿದ್ದರು. ತಾಂತ್ರಿಕವಾಗಿ ಭಾರತೀಯ ಬಾಕ್ಸರ್ ಮೇಲುಗೈ ಸಾಧಿಸಿ ಗೆಲುವಿನ ಮಾಲೆ ಧರಿಸಿದರು.

49 ಕಿಲೋ ವಿಭಾಗದಲ್ಲಿ ಭಾರತದ ರಾಷ್ಟ್ರೀಯ ಚಾಂಪಿಯನ್ ದೀಪಕ್ ಸಿಂಗ್ ಅವರು ಆಫ್ಘನ್ ಎದುರಾಳಿ ರಮೀಶ್ ರಹಮಾನಿ ಅವರಿಂದ ವಾಕೋವರ್ ಪಡೆದು ನೇರ 4ರ ಘಟ್ಟಕ್ಕೆ ಎಂಟ್ರಿ ಪಡೆದರು. ಇನ್ನು, ಮಹಿಳೆಯರ 57 ಕಿಲೋ ವಿಭಾಗದಲ್ಲಿ ಸೋನಿಯಾ ಚಹಲ್ ಅವರು ಕೊರಿಯಾದ ಜೋ ಸೋನ್ ಹ್ವಾ ಅವರನ್ನ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದರು.

ಉತ್ತರಾ ಖಂಡ್ ರಾಜ್ಯದ ಕವೀಂದರ್ ಸಿಂಗ್ ಬಿಷ್ತ್ ಅವರು ಕಳೆದ ತಿಂಗಳಷ್ಟೇ ಫಿನ್​ಲೆಂಡ್ ದೇಶದಲ್ಲಿ ನಡೆದ ಬಾಕ್ಸಿಂಗ್ ಟೂರ್ನಿಯಲ್ಲಿ ಚಿನ್ನ ಗೆದ್ದಿದ್ದರು. ಅದಕ್ಕೂ ಮುನ್ನ ಅವರು ವಿಶ್ವ ಬಾಕ್ಸಿಂಗ್ ಚಾಂಪಿಯನ್​ಶಿಪ್​ನ ಫ್ಲೈವೈಟ್ ವಿಭಾಗದಲ್ಲಿ ಕ್ವಾರ್ಟರ್​ಫೈನಲ್ ತಲುಪಿ ತಮ್ಮ ಪ್ರತಿಭೆ ತೋರಿದ್ದರು.

Comments are closed.