ಕ್ರೀಡೆ

ರಸೆಲ್‌ ಸಿಡಿಲಬ್ಬರದ ಬ್ಯಾಟಿಂಗ್‌ ಬೆದರಿದ ಆರ್ ಸಿಬಿ; ಕೆಕೆಆರ್ ಗೆ 5 ವಿಕೆಟ್ ಗಳ ಭರ್ಜರಿ ಗೆಲುವು

Pinterest LinkedIn Tumblr

ಬೆಂಗಳೂರು: ಐಪಿಎಲ್ ನಲ್ಲಿ ಸೋಲಿನ ಸರಣಿ ಮುಂದುವರೆಸಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ವಿರುದ್ಧ ಕೋಲ್ಕತ್ತಾ ನೈಟ್‌ರೈಡರ್ಸ್‌ ಶುಕ್ರವಾರ ಐದು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.

ಇಂದು ಚಿನ್ನಸ್ವಾಮಿ ಕ್ರೀಂಡಾಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ, ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 205ರನ್ ಸೇರಿಸಿತು.

ಆರ್‌ಸಿಬಿ ನೀಡಿದ ಬೃಹತ್ ಮೊತ್ತದ ಸವಾಲು ಬೆನ್ನಟ್ಟಿದ ಕೆಕೆಆರ್, ಆಂಡ್ರೆ ರಸೆಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಇನ್ನು ಐದು ಎಸೆತಗಳು ಬಾಕಿ ಇರುವಂತೆಯೇ ಐದು ವಿಕೆಟ್ ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ತವರು ನೆಲದಲ್ಲಾದರೂ ಖಾತೆ ತೆರೆಯಬೇಕು ಎಂಬ ಬೆಂಗಳೂರು ಕನಸು ಭಗ್ನವಾಗಿದೆ.

ಕೆಕೆಆರ್ ಪರ ಕ್ರಿಸ್‌ ಲಿನ್‌ (43) ಮತ್ತು ರಾಬಿನ್‌ ಉತ್ತಪ್ಪ (33) ಉತ್ತಮ ಆರಂಭ ಒದಗಿಸಿದರೆ, ಇನಿಂಗ್ಸ್‌ ಅಂತ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್‌ ನಡೆಸಿದ ಆ್ಯಂಡ್ರೆ ರಸೆಲ್‌ ಕೇವಲ 13 ಎಸೆತಗಳಲ್ಲಿ 1 ಫೋರ್‌ ಮತ್ತು ಬರೋಬ್ಬರಿ 7 ಸಿಕ್ಸರ್‌ಗಳೊಂದಿಗೆ ಅಜೇಯ 48 ರನ್‌ಗಳನ್ನು ಸಿಡಿಸಿದರು.

Comments are closed.