ಕ್ರೀಡೆ

ಅಂಪೈರ್‌ಗಳ ಎಡವಟ್ಟು: ಸೋಲಿನ ಬಳಿಕ ಮ್ಯಾಚ್ ರೆಫ್ರಿ ಕೊನೆಗೆ ನುಗ್ಗಿದ್ದ ವಿರಾಟ್ ಕೊಹ್ಲಿ!

Pinterest LinkedIn Tumblr

ಬೆಂಗಳೂರು: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅಂಪೈರ್ ಗಳ ನೋಬಾಲ್ ಎಡವಟ್ಟಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡ 6 ರನ್ ಗಳಿಂ ರೋಚಕ ಸೋಲು ಅನುಭವಿಸಿತ್ತು. ಇನ್ನು ಅಂಪೈರ್ ಗಳ ವಿರುದ್ಧ ಮೈದಾನದಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದ ವಿರಾಟ್ ಕೊಹ್ಲಿ ಪಂದ್ಯದ ಬಳಿಕ ಮ್ಯಾಚ್ ರೆಫ್ರಿ ರೂಂಗೆ ನುಗ್ಗಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಸೋಲಿನಿಂದ ತೀವ್ರ ಆಕ್ರೋಶಗೊಂಡಿದ್ದ ವಿರಾಟ್ ಕೊಹ್ಲಿ ಈ ವೇಳೆ ಅಂಪೈರ್ ರವಿ ಕೊಠಡಿಗೆ ಪ್ರವೇಶ ಮಾಡಿದ್ದು ರವಿ ವಿರುದ್ಧ ಅವಾಚ್ಯ ಪದವನ್ನು ಬಳಿಸಿ ನಿಂದನೆ ಮಾಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಂಪೈರ್ ನಿಂದನೆ ಮಾಡಿದ್ದು ಅಲ್ಲದೆ ಇದರಿಂದ ನನ್ನ ಮೇಲೆ ಯಾವುದೇ ಕ್ರಮಕೈಗೊಂಡರೂ ನನಗೆ ಚಿಂತೆ ಇಲ್ಲ ಎಂದಿದ್ದಾರೆ. ಮ್ಯಾಚ್ ರೆಫ್ರಿ ಆಗಿದ್ದ ಮನು ನಯ್ಯರ್ ವಿರುದ್ಧ ಕೂಡ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಶಿಕ್ಷೆ ನೀಡುವುದು ಅನುಮಾನ ಎನ್ನಲಾಗಿದೆ. ಆದರೆ ಫೇರ್ ಫ್ಲೇ ಅವಾರ್ಡ್ ನಲ್ಲಿ ಆರ್ಸಿಬಿ ಅಂಕ ಕಳೆದುಕೊಳ್ಳುವ ಸಾಧ್ಯತೆ ಇದೆ.

Comments are closed.