ಕ್ರೀಡೆ

ಸುದೀರ್ಘ ವರ್ಷಗಳ ಬಳಿಕ ಸೌರವ್ ಗಂಗೂಲಿ ಮತ್ತೆ ಬ್ಯಾಟ್!

Pinterest LinkedIn Tumblr


ದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಮತ್ತೆ ಬ್ಯಾಟ್ ಹಿಡಿದು ಘರ್ಜಿಸಿದ್ದಾರೆ. ಕ್ರಿಕೆಟ್ ನಿವೃತ್ತಿ ಹೇಳಿದ ಬಳಿಕ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪುಣೆ ವಾರಿಯರ್ಸ್ ಐಪಿಎಲ್ ತಂಡದಲ್ಲಿ ಕಾಣಿಸಿಕೊಂಡಿದ್ದ ಗಂಗೂಲಿ ಬಳಿಕ ಕ್ರಿಕೆಟ್ ಆಡಳಿತದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಸುದೀರ್ಘ ವರ್ಷಗಳ ಬಳಿಕ ಗಂಗೂಲಿ ಮತ್ತೆ ಬ್ಯಾಟ್ ಹಿಡಿದಿದ್ದಾರೆ.

12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಲಹೆಗಾರನಾಗಿರುವ ಗಂಗೂಲಿ ಇದೀಗ ಆಟಗಾರರಿಗೆ ಫೀಲ್ಡಿಂಗ್ ಪ್ರಾಕ್ಟೀಸ್ ಮಾಡಿಸಿದ್ದಾರೆ. ಈ ವೇಳೆ ಥ್ರೋಡೌನ್ ಎಸೆತಗಳಿಗೆ ಗಂಗೂಲಿ ಬ್ಯಾಟ್ ಮೂಲಕ ಆಫ್ ಸೈಡ್ ಬ್ಯಾಟಿಂಗ್ ಮಾಡಿದ್ದಾರೆ.

ಆಫ್ ಸೈಡ್ ಬ್ಯಾಟಿಂಗ್‌ನಲ್ಲಿ ಗಂಗೂಲಿಯನ್ನು ಮೀರಿಸುವ ಬ್ಯಾಟ್ಸ್‌ಮನ್ ಯಾರು ಇಲ್ಲ. ಇದೀಗ ಇದೇ ರೀತಿ ಶಾಟ್‌ಗಳನ್ನೂ ನೆಟ್ ಪ್ರಾಕ್ಟೀಸ್‌ನಲ್ಲಿ ಗಂಗೂಲಿ ಹೊಡೆದಿದ್ದಾರೆ. ಈ ಮೂಲಕ ಡೆಲ್ಲಿ ತಂಡದ ಆಟಗಾರಿಗೆ ಫೀಲ್ಡಿಂಗ್ ಪ್ರಾಕ್ಟೀಸ್ ಮಾಡಿಸಿದ್ದಾರೆ

Comments are closed.