ಕ್ರೀಡೆ

ಈ ರೀತಿಯ ರನೌಟ್ ಖಂಡಿತವಾಗಿಯೂ ನೀವು ನೋಡಿರಲಿಕ್ಕಿಲ್ಲ ! ಈ ವಿಡಿಯೋ ನೋಡಿದ್ರೆ ನಗುವುದು ಗ್ಯಾರಂಟಿ

Pinterest LinkedIn Tumblr

ಮೆಲ್ಬರ್ನ್: ಕ್ರಿಕೆಟ್ ನಲ್ಲಿ ಅಪರೂಪದ ಪ್ರಸಂಗಗಳು ನಡೆಯುತ್ತಿರುತ್ತವೆ ಎಂಬುದಕ್ಕೆ ಇದು ಒಂದು ಸಾಕ್ಷಿ. ಹೌದು ಗಾಯಗೊಂಡು ರನ್ನರ್ ಅನ್ನು ಇಟ್ಟುಕೊಂಡಿದ್ದರು ಸಹ ರನ್ ಕದಿಯುವ ಭರದಲ್ಲಿ ಬ್ಯಾಟ್ಸ್‌ಮನ್ ತಾನೇ ಓಡಿ ರನೌಟ್ ಆಗಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಆಸ್ಟ್ರೇಲಿಯಾದ ಶೆಫೀಲ್ಡ್ ಶೀಲ್ಡ್ ಟೂರ್ನಿಯಲ್ಲಿ ಈ ಘಟನೆ ನಡೆದಿದೆ. ವಿಕ್ಟೋರಿಯಾ ವಿರುದ್ಧದ ಪಂದ್ಯದಲ್ಲಿ ನ್ಯೂ ಸೌತ್ ವೇಲ್ಸ್ ನ ಸ್ಟೀವ್ ಓ ಕೀಫ್ ಸ್ನಾಯು ಸೆಳೆತಕ್ಕೆ ತುತ್ತಾಗಿದ್ದ ಕಾರಣ ಅವರಿಗೆ ರನ್ನರ್ ಅನ್ನು ನೀಡಲಾಗಿತ್ತು.

ಸ್ಕಾಟ್ ಬೋಲೆಂಡ್ ಬೌಲಿಂಗ್ ನಲ್ಲಿ ತಾವು ಎದುರಿಸಿದ ಮೊದಲ ಎಸೆತವನ್ನು ಮಿಡ್ ಆನ್ ನತ್ತ ಬಾರಿಸಿದ ಓ ಕೀಫ್, ರನ್ನರ್ ಇರುವುದನ್ನು ಮರೆತು ತಾವೇ ಸ್ವತಃ ಓಡಲು ಆರಂಭಿಸಿದರು.

ಇನ್ನು ನಾನ್ ಸ್ಟ್ರೈಕ್ ನಲ್ಲಿದ್ದ ಪೀಟರ್ ನೀವಿಲ್, ಓ ಕೀಫ್ ಕರೆಗೆ ಸ್ಫಂದಿಸಿ ರನ್ ಗಾಗಿ ಓಡಿದರು. ಈ ವೇಳೆ ರನ್ನರ್ ಆಗಿ ಬಂದಿದ್ದ ನಿಕ್ ಲಾರ್ಕಿನ್ ಸಹ ಓಡಿದ್ದರಿಂದ ಗೊಂದಲ ಸೃಷ್ಟಿಯಾಯಿತು. ಕ್ಷೇತ್ರ ರಕ್ಷಕ ಜಾನ್ ಹಾಲೆಂಡ್ ಚೆಂಡನ್ನು ಕೀಪರ್ ಗೆ ಎಸೆದು ಓ ಕೀಫ್ ಕ್ರೀಸ್ ತಲುಪುವ ವೇಳೆಗೆ ರನೌಟ್ ಮಾಡಿದರು.

Comments are closed.