ಕ್ರೀಡೆ

ಅಪರೂಪದ ದಾಖಲೆಯನ್ನು ನಿರ್ಮಿಸಿದ ಕೊಹ್ಲಿ ! ಯಾರ ದಾಖಲೆ ಮುರಿದ್ದಿದ್ದಾರೆ ನೋಡಿ…

Pinterest LinkedIn Tumblr

ಹೈದರಾಬಾದ್: ಮುತ್ತಿನ ನಗರಿ ಹೈದರಾಬಾದ್ ನಲ್ಲಿ ನಿನ್ನೆ ನಡೆದ ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಅತಿಥೇಯ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ. ಅಂತೆಯೇ ತಂಡದ ನಾಯಕ ವಿರಾಟ್ ಕೊಹ್ಲಿ ಅಪೂರ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಹೌದು.. ಈ ಪಂದ್ಯದ ಗೆಲುವಿನ ಮೂಲಕ ನಾಯಕ ವಿರಾಟ್ ಕೊಹ್ಲಿ ವಿಂಡೀಸ್ ಕ್ರಿಕೆಟ್ ದಂತಕಥೆ ವಿವಿಯನ್ ರಿಚರ್ಡ್ಸ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ನಿನ್ನೆಯ ಪಂದ್ಯದ ಗೆಲುವಿನ ಮೂಲಕ ಕೊಹ್ಲಿ ತಮ್ಮ ನಾಯಕತ್ವದ ಗೆಲುವಿನ ಪಂದ್ಯಗಳ ಸಂಖ್ಯೆಯನ್ನು 48ಕ್ಕೆ ಏರಿಕೆ ಮಾಡಿಕೊಂಡರು. ಅಂತೆಯೇ ಕೊಹ್ಲಿ ಅಪರೂಪದ ದಾಖಲೆಯನ್ನು ನಿರ್ಮಿಸಿದ್ದು, ವಿಂಡೀಸ್ ದಂತಕಥೆ ವಿವಿಯನ್ ರಿಚರ್ಡ್ಸ್ ಅವರ ದಾಖಲೆಯನ್ನು ಕೊಹ್ಲಿ ಹಿಂದಿಕ್ಕಿದ್ದಾರೆ.

ವಿವಿಯನ್ ರಿಚರ್ಡ್ಸ್ ಅವರ ನಾಯಕತ್ವದಲ್ಲಿ ವಿಂಡೀಸ್ ತಂಡ ಒಟ್ಟು 47 ಏಕದಿನ ಪಂದ್ಯಗಳನ್ನು ಗೆದ್ದಿದ್ದು, 48 ಪಂದ್ಯಗಳನ್ನು ಗೆಲ್ಲುವ ಮೂಲಕ ಕ್ಯಾಪ್ಟನ್ ಕೊಹ್ಲಿ ವಿವಿಯನ್ ರಿಚರ್ಡ್ಸ್ ದಾಖಲೆಯನ್ನು ಮುರಿದಿದ್ದಾರೆ. ಅಂತೆಯೇ ಈ ಪಟ್ಟಿಯಲ್ಲಿ ಕೊಹ್ಲಿ 3ನೇ ಸ್ಥಾನಕ್ಕೇರಿದ್ದಾರೆ.

ಏಕದಿನ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಏಕದಿನ ಪಂದ್ಯಗಳನ್ನು ಗೆದ್ದ ನಾಯಕರ ಪಟ್ಟಿಯಲ್ಲಿ ಆಸ್ಟ್ರೇಲಿಯಾ ನಾಯಕ ರಿಕ್ಕಿ ಪಾಂಟಿಂಗ್ ಅಗ್ರ ಸ್ಥಾನದಲ್ಲಿದ್ದು, ಪಾಟಿಂಗ್ ನಾಯಕತ್ವದಲ್ಲಿ ಆಸಿಸ್ ತಂಡ ಒಟ್ಟು 51 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇನ್ನು ಎರಡನೇ ಸ್ಥಾನದಲ್ಲಿ ಮತ್ತೆ ವೆಸ್ಟ್ ಇಂಡೀಸ್ ತಂಡದ ಮತ್ತೋಂದು ಕ್ರಿಕೆಟ್ ದಂತಕಥೆ ಕ್ಲೈವ್ ಲಾಯ್ಡ್ ಇದ್ದು, ಕ್ಲೈವ್ ಲಾಯ್ಡ್ ನಾಯಕತ್ವದಲ್ಲಿ ವಿಂಡೀಸ್ ತಂಡ 50 ಪಂದ್ಯಗಳಲ್ಲಿ ಜಯಗಳಿಸಿದೆ.

Comments are closed.