ಕ್ರೀಡೆ

ಧೋನಿ ಮಿಂಚಿನ ವೇಗದ ಸ್ಟಂಪಿಂಗ್: ಕೊಂಚ ಕಕ್ಕಾಬಿಕ್ಕಿಯಾಗಿ ಪೆವಿಲಿಯನತ್ತ ನಡೆದ ಲೂಕಿ!

Pinterest LinkedIn Tumblr


ನೇಪಿಯರ್: ಮಿಂಚಿನ ವೇಗದ ಸ್ಟಂಪಿಂಗ್‌ ಮಾಡುವುದರಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಗೆ ಯಾರು ಸರಿಸಾಟಿಯಾಗಿ ನಿಲ್ಲಲು ಸಾಧ್ಯವಿಲ್ಲ ಎಂಬುದು ಮತ್ತೊಮ್ಮೆ ಪ್ರೂವ್ ಆಗಿದೆ.

37ರ ಹರೆಯದ ಧೋನಿ ತಾವು ವಿಕೆಟ್ ಹಿಂದುಗಡೆ ಮಾಡುವ ಚಮತ್ಕಾರಗಳಿಂದ ತಾವು ಈಗಲೂ ಶ್ರೇಷ್ಠ ಎಂಬುದನ್ನು ನಿರೂಪಿಸಿದ್ದಾರೆ.

ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಧೋನಿ ಮತ್ತೆ ಮಿಂಚಿನ ವೇಗದಲ್ಲಿ ಸ್ಟಂಪಿಂಗ್ ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

ಕಿವೀಸ್ ತಂಡದ ಲೂಕಿ ಫೆರ್ಗ್ಯೂಸನ್ 0 ರನ್ ಗಳಿಸಿದ್ದಾಗ ಧೋನಿ ಮಿಂಚಿನ ವೇಗದಲ್ಲಿ ಸ್ಟಂಪಿಂಗ್ ಮಾಡಿದ್ದರು. ಧೋನಿ ಅಪೀಲ್ ಮಾಡಿದರೇ ಶೇಕಡ 90ರಷ್ಟು ಬಾರಿ ಅದು ಔಟ್ ಆಗಿರುತ್ತದೆ. ಬಳಿಕ ಪರಿಶೀಲಿಸಿದ ಥರ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು. ಇದರಿಂದ ಕೊಂಚ ಕಕ್ಕಾಬಿಕ್ಕಿಯಾದ ಲೂಕಿ ನಂತರ ಪೆವಿಲಿಯನತ್ತ ನಡೆದರು.

Comments are closed.