ಕ್ರೀಡೆ

ಮೈದಾನದಲ್ಲೇ ಬ್ಯಾಟಿಂಗ್ ಮಾಡುವ ವೇಳೆ ಸಾವನ್ನಪ್ಪಿದ ಮುಂಬೈ ಬ್ಯಾಟ್ಸ್‌ಮನ್!

Pinterest LinkedIn Tumblr

ಮುಂಬೈ: ಮುಂಬೈ ಲೋಕಲ್ ಕ್ರಿಕೆಟ್‌ನಲ್ಲಿ ಗಮನಸೆಳೆದಿರುವ ಯುವ ಬ್ಯಾಟ್ಸ್‌ಮನ್ ವೈಭವ್ ಕೇಸರ್ಕರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬ್ಯಾಟಿಂಗ್ ಮಾಡುವ ವೇಳೆ ವೈಭವ್ ಹೃದಯಾಘಾತಕ್ಕೆ ತುತ್ತಾಗಿದ್ದರು. ಆದರೆ ಇದನ್ನೂ ಲೆಕ್ಕಿಸದೇ ವೈಭವ್ ಬೌಂಡರಿ-ಸಿಕ್ಸರ್ ಸಿಡಿಸಿ ಮಿಂಚಿದ್ದರು.

ಬ್ಯಾಟಿಂಗ್ ಬಳಿಕ ಫೀಲ್ಡಿಂಗ್ ಇಳಿದ 24 ವರ್ಷದ ವೈಭವ್ ತೀವ್ರ ಎದೆ ನೋವಿನಿಂದ ಬಳಲಿದರು. ತಕ್ಷಣವೇ ವೈಭವ್ ಅವರನ್ನ ಸ್ಥಳೀಯ ಆಸ್ಪತ್ರಗೆ ದಾಖಲಿಸಲಾಯಿತು. ಅಷ್ಟರಲ್ಲೇ ವೈಭವ್ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಟೆನಿಸ್ ಬಾಲ್ ಕ್ರಿಕೆಟ್‌ನಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ಎಂದೇ ವೈಭವ್ ಗುರುತಿಸಿಕೊಂಡಿದ್ದರು.

ಟೆನಿಸ್ ಬಾಲ್ ಟೂರ್ನಮೆಂಟ್‌ ಯೂಟ್ಯೂಬ್‌ನಲ್ಲಿ ಲೈವ್ ನೀಡಲಾಗಿತ್ತು. ಈ ವೇಳೆ ವೈಭವ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆಯೇ ಎದೆ ನೋವಿನಿಂದ ಬಳಲುತ್ತಿರುವುದ ಸ್ಪಷ್ಟವಾಗಿ ಗೋಚರಿಸಿತ್ತು. ಬಡ ಕುಟಂಬದಿಂದ ಬಂದಿರುವ ವೈಭವ್ ಟೀಂ ಇಂಡಿಯಾ ಪರ ಆಡೋ ಕನಸು ಕಂಡಿದ್ದರು. ಆದರೆ ಲೆದರ್ ಬಾಲ್ ಹಾಗೂ ಕ್ಲಬ್ ಕ್ರಿಕೆಟ್‌ನಲ್ಲಿ ಸೇರಲು ಆರ್ಥಿಕ ಸಂಕಷ್ಟ ಎದುರಾಗಿತ್ತು. ಹೀಗಾಗಿ ವೈಭವ್ ಟೆನಿಸ್ ಬಾಲ್ ಕ್ರಿಕೆಟ್‌ ಆಡುತ್ತಿದ್ದರು. ದಿಢೀರ್ ವೈಭವ್ ಅವರನ್ನ ಕಳೆದುಕೊಂಡಿರುವ ಕುಟುಂಬ ದಿಕ್ಕೇ ತೋಚದಂತಾಗಿದೆ.

Comments are closed.